alex Certify ʼರಾಜಕೀಯʼ ಪ್ರವೇಶ ಕುರಿತಂತೆ ನಟ ಅರ್ಜುನ್ ಸರ್ಜಾರಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಾಜಕೀಯʼ ಪ್ರವೇಶ ಕುರಿತಂತೆ ನಟ ಅರ್ಜುನ್ ಸರ್ಜಾರಿಂದ ಮಹತ್ವದ ಹೇಳಿಕೆ

ಮಧುಗಿರಿ: ರಾಜಕೀಯ ಪ್ರವೇಶ ಕುರಿತಂತೆ ನಟ ಅರ್ಜುನ್‌ ಸಸರ್ಜಾ ಮಹತ್ವದ ಹೇಳಿಕೆ ನೀಡಿದ್ದಾರೆ. “ನಾನು ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ. ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದೊಡ್ಡೇರಿ ಹೋಬಳಿ ಜನತೆಯ ಒತ್ತಾಯಕ್ಕೆ ಮಣಿದು ನನ್ನ ತಾಯಿ ಲಕ್ಷ್ಮೀದೇವಮ್ಮ ಒಮ್ಮೆ ಜಿ.ಪಂ. ಸದಸ್ಯರಾಗಿದ್ದರು. ಆದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ” ಎಂದು ಹೇಳಿದರು.

ತಮ್ಮ ತಾಯಿ ಲಕ್ಷ್ಮೀದೇವಮ್ಮ ಅವರು ಗ್ರಾಮದಲ್ಲಿ ಮಾಡಿದ ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದ ಅರ್ಜುನ್ ಸರ್ಜಾ, “ನನ್ನ ತಾಯಿ ಈ ಗ್ರಾಮದ ಶಾಲೆಗೆ 1 ಎಕರೆ ದಾನ ಮಾಡಿ ಶಾಲಾ ಕಟ್ಟಡ ಕಟ್ಟಿಸಿ ಮಕ್ಕಳಿಗೆ ನೆರಳು ನೀಡಿದ್ದಾರೆ. ನಮ್ಮ ಮನೆ ದೇವರಾದ ಅಹೋಬಲ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ” ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...