ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್ ತಿನ್ನೋದು ಹಲವರ ಅಭ್ಯಾಸ. ಇನ್ನು ಕೆಲವರು ಚಿಪ್ಸ್, ನಮ್ಕೀನ್ ಸೇವಿಸ್ತಾರೆ. ಡ್ರೈಫ್ರೂಟ್ಸ್ ಕೂಡ ತಿಂತಾರೆ. ಆದ್ರೆ ಟೀ ಜೊತೆ ಯಾವ್ಯಾವ ಸ್ನಾಕ್ ತಿನ್ನಬೇಕು, ಯಾವುದನ್ನೆಲ್ಲ ತಿನ್ನಬಾರದು ಅನ್ನೋದನ್ನು ತಿಳಿದುಕೊಳ್ಳಬೇಕು. ಚಹಾ ಜೊತೆಗಿನ ಕೆಟ್ಟ ಕಾಂಬಿನೇಷನ್ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.
ಚಹಾದೊಂದಿಗೆ ನೀರು ಕುಡಿಯಬಾರದು. ಅನೇಕ ಜನರು ಚಹಾ ಕುಡಿಯುವಾಗ ನೀರು ಕುಡಿಯುತ್ತಾರೆ, ಇದು ಅವರ ಆರೋಗ್ಯವನ್ನು ಹದಗೆಡಿಸುತ್ತದೆ. ಯಾಕೆಂದರೆ ಹೀಗೆ ಮಾಡುವುದರಿಂದ ನಿಮಗೆ ಅಸಿಡಿಟಿ ಸಮಸ್ಯೆ ಎದುರಾಗಬಹುದು. ಇದಲ್ಲದೇ ಟೀ ಜೊತೆ ನಿಂಬೆಹಣ್ಣಿನ ಬಳಕೆ ಕೂಡ ಒಳ್ಳೆಯದಲ್ಲ. ನೀವು ಚಹಾದೊಂದಿಗೆ ನಿಂಬೆಯನ್ನೂ ಸೇವಿಸಿದರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದರ ಹೊರತಾಗಿ, ಅರಿಶಿನದಿಂದ ಮಾಡಿದ ವಸ್ತುಗಳನ್ನು ಚಹಾದೊಂದಿಗೆ ಸೇವಿಸಬಾರದು. ಚಹಾ ಜೊತೆಗೆ ಅರಿಶಿನ ಸೇರಿದರೆ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಚಹಾ ಮತ್ತು ಹಸಿರು ತರಕಾರಿ ಕೆಟ್ಟ ಕಾಂಬಿನೇಷನ್. ಇವೆರಡನ್ನೂ ಒಟ್ಟಾಗಿ ಸೇವಿಸಬಾರದು. ಜೊತೆಗೆ ಟೀ ಕುಡಿಯುತ್ತ ಡ್ರೈ ಫ್ರೂಟ್ಸ್ ಕೂಡ ತಿನ್ನಬೇಡಿ. ಯಾಕಂದ್ರೆ ಡ್ರೈಫ್ರೂಟ್ಸ್ ನಲ್ಲಿರುವ ಐರನ್ ನ ಕೆಮಿಕಲ್ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.