ಮೊಡವೆ, ಒಣ ಚರ್ಮ ಸೇರಿದಂತೆ ಅನೇಕ ಸಮಸ್ಯೆಗಳು ಸಾಮಾನ್ಯ. ಈ ಸಮಸ್ಯೆ ಹೊತ್ತು ಕೆಲವರು ಆಸ್ಪತ್ರೆಗೆ ಹೋದ್ರೆ ಮತ್ತೆ ಕೆಲವರು ಮನೆ ಮದ್ದನ್ನು ಮಾಡ್ತಾರೆ. ಆದ್ರೆ ಮನೆಮದ್ದಿನಲ್ಲಿ ಸ್ವಲ್ಪ ಯಡವಟ್ಟಾದ್ರೆ ರಿಯಾಕ್ಷನ್ ಆಗಿ ಕುರೂಪಿಯಾಗುವ ಸಾಧ್ಯತೆಯಿರುತ್ತದೆ.
ಭಾರತದಲ್ಲಿ ಅನೇಕರು ತಮ್ಮ ಮುಖಕ್ಕೆ ಬಾಡಿ ಲೋಷನ್ ಹಚ್ಚುತ್ತಾರೆ. ಫೇಸ್ ಕ್ರೀಮ್ ಮತ್ತು ಸನ್‌ಸ್ಕ್ರೀನ್ ಬದಲಿಗೆ ಬಾಡಿ ಲೋಷನ್ ಬಳಸಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ. ಬಾಡಿ ಲೋಷನ್ ದಪ್ಪ ಮತ್ತು ಎಣ್ಣೆಯುಕ್ತವಾಗಿದ್ದು, ಇದನ್ನು ದೇಹಕ್ಕಾಗಿ ತಯಾರಿಸಲಾಗುತ್ತದೆ. ಇದನ್ನು ಮುಖದ ಮೇಲೆ ಹಚ್ಚುವುದರಿಂದ ಎಣ್ಣೆಯುಕ್ತ ಚರ್ಮ, ಅಲರ್ಜಿ ಇತ್ಯಾದಿಗಳ ತೊಂದರೆ ಉಂಟಾಗುತ್ತದೆ.
ಮಯೋನಿಸ್: ಬರ್ಗರ್ ಮತ್ತು ಸ್ಯಾಂಡ್‌ವಿಚ್‌ಗಳನ್ನು ಹೊರತುಪಡಿಸಿ ಕೂದಲಿಗೆ ಮಯೋನಿಸ್ ಹಚ್ಚಲಾಗ್ತಿದೆ. ಕೂದಲು ಆರೋಗ್ಯಕ್ಕೆ ಇದನ್ನು ಬಳಸಲಾಗ್ತಿದೆ. ಆದ್ರೆ ಇದನ್ನು ಎಂದಿಗೂ ಫೇಸ್ ಪ್ಯಾಕ್ ಆಗಿ ಬಳಸಬೇಡಿ. ಅಸಲಿಗೆ ಮೇಯೋನೀಸ್ ಆಮ್ಲೀಯ ಅಂಶ ಹೊಂದಿರುತ್ತೆ. ಮತ್ತು ಇದು ನಂಜು ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ಚರ್ಮದ ರಂಧ್ರಗಳು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಮೊಡವೆ ಮತ್ತು ಗುಳ್ಳೆಗಳ ಸಮಸ್ಯೆ ಹೆಚ್ಚಾಗುತ್ತದೆ.
ಸಾಬೂನು: ಸ್ನಾನ ಮಾಡುವಾಗ ಮುಖಕ್ಕೆ ಸೋಪ್ ಹಚ್ಚುವುದು ಸಾಮಾನ್ಯ. ಆದ್ರೆ ಇದು ಮುಖದ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕಿ ಚರ್ಮವನ್ನು ಒಣಗಿಸುತ್ತದೆ. ಶುಷ್ಕ ಚರ್ಮದಿಂದಾಗಿ ತುರಿಕೆ ಕಾಡುತ್ತದೆ.
ಬಿಸಿ ನೀರು: ಬೆಚ್ಚನೇಯ ನೀರಿನಿಂದ ಮುಖ ತೊಳೆದರೆ ಒಳ್ಳೆಯದು. ಇದು ಮುಖದ ರಂಧ್ರಗಳನ್ನು ತೆರೆಯುತ್ತದೆ. ಅದರಿಂದ ರಂಧ್ರದೊಳಗೆ ಇದ್ದಂತಹ ಕಲ್ಮಶಗಳು ಹೊರಗೆ ಹೋಗುತ್ತೆ. ಆದ್ರೆ ಬಿಸಿ ನೀರಿನಿಂದ ಮುಖ ತೊಳೆಯುವುದು ಒಳ್ಳೆಯದಲ್ಲ. ಮುಖದ ನೈಸರ್ಗಿಕ ತೇವಾಂಶ ಕಡಿಮೆಯಾಗುತ್ತದೆ.