ಅಸಿಡಿಟಿ ತೊಂದರೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಕಿರಿಕಿರಿ ತಾಳಲಾರದೇ ಪ್ರತಿದಿನ ಔಷಧ ಸೇವಿಸುವವರೇ ಹೆಚ್ಚು. ಆದರೆ ಇದರ ಬದಲು ಪರಿಣಾಮಕಾರಿ ಮನೆಮದ್ದನ್ನು ಪ್ರಯತ್ನಿಸುವುದು ಉತ್ತಮ. ಅಸಿಡಿಟಿ ಸಮಸ್ಯೆಗೆ ಓಮ ಮತ್ತು ಬ್ಲಾಕ್ ಸಾಲ್ಟ್‌ನಲ್ಲಿ ಪರಿಹಾರವಿದೆ. ಓಮದ ಕಷಾಯ ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಬಲಪಡಿಸುತ್ತದೆ.
ಒಂದು ಲೋಟ ನೀರಿಗೆ ಅರ್ಧ ಚಮಚ ಓಮದ ಕಾಳು ಸೇರಿಸಿ ಅದನ್ನು ಚೆನ್ನಾಗಿ ಕುದಿಸಿ. ಅದನ್ನು ಸೋಸಿಕೊಂಡು ಚಿಟಿಕೆ ಬ್ಲಾಕ್ ಸಾಲ್ಟ್ ಬೆರೆಸಿ. ಉಗುರು ಬೆಚ್ಚಗಾದ ಬಳಿಕ ಕಷಾಯವನ್ನು ಕುಡಿಯಿರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕಷಾಯ ಕುಡಿಯುವುದು ಸೂಕ್ತ. ನಿಯಮಿತವಾಗಿ ಓಮದ ಕಷಾಯ ಸೇವನೆ ಮಾಡುವುದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ. ಓಮ ಮತ್ತು ಬ್ಲಾಕ್ ಸಾಲ್ಟ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಸಹಕಾರಿಯಾಗಿವೆ.