ಪುರುಷರಿಗೆ ಗಡ್ಡ, ಮೀಸೆ ಬೆಳೆಯೋದು ಕಾಮನ್. ಆದರೆ ಕೆಲವೊಮ್ಮೆ ಮಹಿಳೆಯರಿಗೆ ಕೂಡ ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುತ್ತದೆ. ಅದನ್ನು ತೆಗೆದುಹಾಕಲು ಬ್ಯೂಟಿ ಪಾರ್ಲರ್‌ನಲ್ಲಿ ಹಣ ಖರ್ಚು ಮಾಡಬೇಕು. ಈ ಬ್ಯೂಟಿ ಪಾರ್ಲರ್ ಟ್ರೀಟ್ಮೆಂಟ್‌ನಿಂದ ಕೆಲವೊಮ್ಮೆ ಮುಖದ ಚರ್ಮಕ್ಕೆ ಹಾನಿಯಾಗುವ ಅಪಾಯವೂ ಇರುತ್ತದೆ. ಕೆಲವೊಂದು ಮನೆಮದ್ದುಗಳನ್ನು ಮಾಡಿದ್ರೆ ಮುಖದ ಕೂದಲನ್ನು ನೈಸರ್ಗಿಕವಾಗಿ ತೆಗೆದುಹಾಕಬಹುದು.
ಓಟ್ಸ್ ಮತ್ತು ಬಾಳೆಹಣ್ಣು: ಓಟ್ಸ್ ಮತ್ತು ಬಾಳೆಹಣ್ಣಿನ ಸಹಾಯದಿಂದ ನೀವು ಅನಗತ್ಯ ಮುಖದ ಕೂದಲನ್ನು ತೆಗೆದು ಹಾಕಬಹುದು. ಓಟ್ಸ್ ಅನ್ನು ನೀರಿನಲ್ಲಿ ನೆನೆಸಿ ಅದಕ್ಕೆ ಬಾಳೆಹಣ್ಣನ್ನು ಸೇರಿಸಿಕೊಂಡು ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ನೀವು ಕೂದಲು ತೆಗೆಯಲು ಬಯಸುವ ಮುಖದ ಭಾಗಗಳಿಗೆ ಅನ್ವಯಿಸಿ. ಸ್ವಲ್ಪ ಸಮಯದ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.
ವಾಲ್ನಟ್ ಮತ್ತು ಜೇನುತುಪ್ಪ : ವಾಲ್ನಟ್ಸ್ ಮತ್ತು ಜೇನುತುಪ್ಪ ಅನಗತ್ಯ ಮುಖದ ಕೂದಲನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಾಲ್ನಟ್ ಸಿಪ್ಪೆಗಳನ್ನು ತೆಗೆದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಜೇನುತುಪ್ಪ ಸೇರಿಸಿ. ಈ ಪೇಸ್ಟ್ ಅನ್ನು ಬೆರಳುಗಳ ಮೇಲೆ ಇಟ್ಟುಕೊಂಡು ಮುಖಕ್ಕೆ ಮೃದುವಾಗಿ ಮಸಾಜ್ ಮಾಡಿ, ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯಿರಿ.
ಅರಿಶಿನ ಮತ್ತು ಅಲೋವೆರಾ: ಅರಿಶಿನವು ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಮುಖದ ಕೂದಲನ್ನು ತೆಗೆದುಹಾಕುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ. ಅಲೋವೆರಾ ಜೆಲ್‌ಗೆ ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಅನಗತ್ಯ ಕೂದಲು ಬೆಳೆದಿರುವ ಮುಖದ ಭಾಗಗಳಿಗೆ ಈ ಪೇಸ್ಟ್ ಅನ್ನು ಹಚ್ಚಿರಿ. ಪೇಸ್ಟ್ ಒಣಗಿದ ನಂತರ ಮುಖವನ್ನು ತೊಳೆಯಿರಿ. ನೀವು ಇದನ್ನು ನಿಯಮಿತವಾಗಿ ಬಳಸಿದರೆ ಮುಖದ ಮೇಲೆ ಕೂದಲಿನ ಬೆಳವಣಿಗೆ ಕಡಿಮೆಯಾಗುತ್ತದೆ.
ಪ್ರತಿಯೊಬ್ಬರ ಚರ್ಮವು ಒಂದೇ ರೀತಿಯಲ್ಲಿರುವುದಿಲ್ಲ. ಅಲರ್ಜಿ ಅಥವಾ ಸೂಕ್ಷ್ಮ ಚರ್ಮ ನಿಮ್ಮದಾಗಿದ್ದರೆ ಈ ಮನೆಮದ್ದುಗಳನ್ನು ಮಾಡುವ ವೈದ್ಯರನ್ನು ಸಹ ಸಂಪರ್ಕಿಸಿ. ಮಿಶ್ರಣವನ್ನು ರಭಸವಾಗಿ ಮಸಾಜ್ ಮಾಡಬೇಡಿ. ಲಘುವಾಗಿ ಉಜ್ಜಿದರೆ ಬಯಸಿದ ಫಲಿತಾಂಶವನ್ನು ನೀಡುತ್ತದೆ.