alex Certify ಕಣ್ಣಾಲಿಗಳು ತುಂಬಿ ಬರುತ್ತೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದುಕೊಂಡ ತಂದೆ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಾಲಿಗಳು ತುಂಬಿ ಬರುತ್ತೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದುಕೊಂಡ ತಂದೆ ಸಂಭ್ರಮ

ಮಗುವನ್ನು ಹೊಂದುವುದು ಜಗತ್ತಿನ ಅತ್ಯಂತ ಸುಂದರ ಭಾವನೆಗಳಲ್ಲಿ ಒಂದು. ಹೊಸ ಪೋಷಕರಿಗೆ ತಮ್ಮ ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಅತ್ಯಂತ ಭಾವನಾತ್ಮಕ ಸಂಗತಿಯಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ತನ್ನ ನವಜಾತ ಶಿಶುವನ್ನು ಮೊದಲ ಬಾರಿಗೆ ಹಿಡಿದುಕೊಂಡ ತಂದೆಯ ಪ್ರತಿಕ್ರಿಯೆ ನೆಟ್ಟಿಗರ ಮನಗೆದ್ದಿದೆ.

‘ಗುಡ್ ನ್ಯೂಸ್ ಕರೆಸ್ಪಾಂಡೆಂಟ್’ ಎಂಬ ಟ್ವಿಟ್ಟರ್ ಪೇಜ್ ಒಂದು ಮೈಕ್ರೊಬ್ಲಾಗಿಂಗ್ ಸೈಟ್‌ನಲ್ಲಿ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದೆ. ಮೊದಲ ಬಾರಿಗೆ ತಂದೆಯು ತನ್ನ ನವಜಾತ ಮಗನನ್ನು ಹಿಡಿಯಲು ಅತ್ಯಂತ ಉತ್ಸುಕನಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಭಾರತ್‌ ಬಂದ್: ಕಿಸಾನ್ ಮೋರ್ಚಾ ಬೆಂಬಲಕ್ಕೆ ನಿಂತ ಕಾಂಗ್ರೆಸ್‌, ಟಿಡಿಪಿ ಮತ್ತು ಎಡರಂಗ

ಮಗುವಿನ ತಂದೆಯು ಮುಖಕ್ಕೆ ಮಾಸ್ಕ್ ಧರಿಸಿದ್ದರೂ ಅವನ ಆನಂದ ಕಣ್ಣುಗಳಲ್ಲಿ ತುಂಬಿ ಬಂದಿದೆ. ನರ್ಸ್ ಅವನಿಗೆ ರಿಲ್ಯಾಕ್ಸ್ ಆಗುವಂತೆ ಹೇಳಿದ್ದಾಳೆ. ನಂತರ ದಾದಿಯು ನವಜಾತ ಶಿಶುವನ್ನು ಆತನ ಕೈಗಿಡುತ್ತಾಳೆ. ಮೊದಲ ಬಾರಿಗೆ ತನ್ನ ಮಗನನ್ನು ಹತ್ತಿರದಿಂದ ಹಿಡಿದಿದ್ದರಿಂದ ಅವನು ಆನಂದಭಾಷ್ಪ ಸುರಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯಗೆದ್ದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...