ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ, ಯಾವುದೇ ಕಮಿಟಿಯ ಅಗತ್ಯವಿಲ್ಲ ಎಂದು ನಿರ್ಮಾಪಕ ಕೆ ಮಂಜು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ, ಕಮಿಟಿ ಬೇಕಾಗಿಲ್ಲ. ಕಮಿಟಿ ಮಾಡುವುದರಿಂದ ಸರ್ಕಾರದ ಹಣ ವ್ಯರ್ಥವಾಗುತ್ತದೆ ಅಷ್ಟೇ ಎಂದರು. ಕನ್ನಡ ಚಿತ್ರರಂಗದಲ್ಲಿ ಮಿಟೂ ಇಲ್ಲ, ಇಲ್ಲಿ ವಿಟೂ ಅಷ್ಟೇ ಎಂದು ಅವರು ಹೇಳಿದರು. ನನ್ನ ಕಣ್ಣಿಗೆ ಯಾವುದು ಮೀಟೂ ಕಾಣಿಸುತ್ತಿಲ್ಲ ಎಂದರು.
ಇದರ ಬದಲು ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾ ಬರಲಿ, ಅದರ ಬಗ್ಗೆ ಗಮನ ಹರಿಸಬೇಕು ಎಂದರು.
ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ಕಿರುಕುಳದಂತಹ ಆರೋಪಗಳು ಕೇಳಿಬಂದಿದ್ದು, ಕೇರಳದ ಹೇಮಾ ಮಾದರಿ ಸಮಿತಿಯನ್ನು ಸ್ಯಾಂಡಲ್ ವುಡ್ ಗೂ ರಚಿಸುವಂತೆ ಫೈರ್ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿದೆ.
ಫೈರ್ ಸಂಸ್ಥೆ ಮನವಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಭರವಸೆ ನೀಡಿದ್ದಾರೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ. ಕಾಸ್ಟಿಂಗ್ ಕೌಚ್ ನಂತ ಪ್ರಕರಣಗಳು ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.