ಹಿಂದೂ ದೇವಾಲಯಗಳಿಂದ ಸಂಗ್ರಹವಾದ ಹಣವನ್ನ ಮಸೀದಿ ಹಾಗೂ ಚರ್ಚುಗಳಿಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈಗ ಅದಕ್ಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಡೆಹಿಡಿದಿದ್ದಾರೆ.
ತಸ್ತಿಕ್ ರೂಪದಲ್ಲಿ ಧರ್ಮದಾಯ ದತ್ತಿ ಇಲಾಖೆಯಿಂದ ನೀಡುತ್ತಿದ್ದ ಅನುದಾನಕ್ಕೆ ಹಿಂದೂ ಸಂಘಟನೆಗಳು ಹಾಗೂ ಧಾರ್ಮಿಕ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಈ ಕ್ರಮವನ್ನ ಕೈಗೊಳ್ಳಲಾಗಿದೆ.
ಹಿಂದೂ ದೇವಾಲಯಗಳಿಂದ ಸಂಗ್ರಹವಾದ ಹಣವನ್ನ ಈ ರೀತಿ ಅನ್ಯ ಕಾರಣಕ್ಕೆ ವಿನಿಯೋಗ ಮಾಡುವಂತಿಲ್ಲ. ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆ ಇದ್ದರೆ ಸಂಬಂಧಪಟ್ಟ ಇಲಾಖೆಗಳಿಂದ ಪಡೆದುಕೊಳ್ಳಲಿ. ಆದರೆ ಹಿಂದೂ ದೇಗುಲಗಳ ತಸ್ತಿಖ್ ಹಣವನ್ನ ಇನ್ನು ಮುಂದೆ ಬಳಕೆ ಮಾಡುವಂತಿಲ್ಲ.
ರಾಜ್ಯದಲ್ಲಿ 27 ಸಾವಿರಕ್ಕೂ ಅಧಿಕ ದೇಗುಲಗಳಿಗೆ ಸರ್ಕಾರ ತಸ್ತಿಖ್ ನೀಡುತ್ತಿದೆ. ಇದಕ್ಕೆಂದೇ ವಾರ್ಷಿಕ 133 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದರೆ ಇನ್ಮುಂದೆ ಈ ಹಣ ಕೇವಲ ಹಿಂದೂ ದೇಗುಲಗಳಿಗೆ ಮಾತ್ರ ಬಳಕೆಯಾಗಲಿದೆ ಎಂದು ಧರ್ಮದಾಯ ದತ್ತಿ ಇಲಾಖೆ ಆಯುಕ್ತರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.