
ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಮಾರಕ. ಮಾನವರ ದೇಹದ ಭಾಗಗಳಲ್ಲಿ ಸಣ್ಣ ಪ್ಲಾಸ್ಟಿಕ್ ಕಣಗಳು ಶೇಖರಣೆಯಾಗುತ್ತಿವೆ ಎಂಬ ಆತಂಕಕಾರಿ ಅಂಶವೀಗ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಈ ಮೈಕ್ರೊಪ್ಲಾಸ್ಟಿಕ್‌ಗಳು ಖಾಸಗಿ ಭಾಗಗಳಿಂದ ಮೆದುಳಿಗೆ ಸೇರಿಕೊಳ್ಳುತ್ತಿವೆ.
ಈ ಮೈಕ್ರೋಪ್ಲಾಸ್ಟಿಕ್‌ಗಳ ಗಾತ್ರವು 5 ಮಿಲಿಮೀಟರ್‌ಗಳಿಗಿಂತ ಕಡಿಮೆ ಇರುತ್ತದೆ. ಸುಮಾರು 1 ನ್ಯಾನೋಮೀಟರ್ ಆಗಿರಬಹುದು. ಈ ಪ್ಲಾಸ್ಟಿಕ್‌ಗಳು ಆಹಾರ ಮತ್ತು ಪಾನೀಯಗಳ ಮೂಲಕ ದೇಹದೊಳಗೆ ಸಂಗ್ರಹಗೊಳ್ಳುತ್ತಿವೆ. ಸಂಶೋಧನೆಯ ಪ್ರಕಾರ ಕಳೆದ 8 ವರ್ಷಗಳಲ್ಲಿ ಮೆದುಳಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗಿದೆ.
ಈ ವರ್ಷವೇ ಮೃತ ದೇಹವನ್ನು ಪ್ರಯೋಗಾಲಯದಲ್ಲಿ ಸಂಪೂರ್ಣವಾಗಿ ಪರೀಕ್ಷಿಸಲಾಯಿತು. ಬಳಿಕ ಮೈಕ್ರೋಪ್ಲಾಸ್ಟಿಕ್ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಪ್ರಯೋಗಕ್ಕೆ ಬಳಸಿಕೊಂಡ ಮೃತ ವ್ಯಕ್ತಿಯ ವಯಸ್ಸು 45 ರಿಂದ 50 ವರ್ಷ. ವ್ಯಕ್ತಿಯ ಮೆದುಳಿನಲ್ಲಿ 4800 ಮೈಕ್ರೋಗ್ರಾಂಗಳಷ್ಟು ಪ್ಲಾಸ್ಟಿಕ್ ಸಂಗ್ರಹಗೊಂಡಿರುವುದು ಕಂಡುಬಂದಿದೆ. ಇದರರ್ಥ 99.5 ಪ್ರತಿಶತ ಮೆದುಳು ಮತ್ತು ಉಳಿದವು ಪ್ಲಾಸ್ಟಿಕ್‌ನಿಂದಾಗಿವೆ.
ಅಮೆರಿಕದ ಖ್ಯಾತ ವಿಜ್ಞಾನಿಗಳ ಪ್ರಕಾರ 2016 ಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯರ ದೇಹದಲ್ಲಿ ಪ್ಲಾಸ್ಟಿಕ್ ವೇಗವಾಗಿ ಸಂಗ್ರಹವಾಗುತ್ತಿದೆ. ಇದರಿಂದಾಗಿಯೇ ಮಾರಕ ರೋಗಗಳ ಅಪಾಯ ಕೂಡ ಹೆಚ್ಚಾಗಿದೆ.
ಪ್ಲಾಸ್ಟಿಕ್‌ನ ಸಣ್ಣ ಕಣಗಳು ಮೆದುಳಿನ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತವೆ. ಮೂತ್ರಪಿಂಡ ಮತ್ತು ಯಕೃತ್ತಿಗೆ ಹೋಲಿಸಿದರೆ ಮೆದುಳಿನಲ್ಲಿ ಹೆಚ್ಚು ಪ್ಲಾಸ್ಟಿಕ್ ಸಂಗ್ರಹವಾಗುತ್ತಿದೆ ಎಂಬ ಅಂಶ ಕೂಡ ಪ್ರಯೋಗದಲ್ಲಿ ಬಹಿರಂಗವಾಗಿದೆ.