ಟಾಯ್ಲೆಟ್ ಸೀಟ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದ್ರೆ ಟಾಯ್ಲೆಟ್ ಸೀಟ್ ಗಿಂತ ಮಹಿಳೆಯರ ಪರ್ಸ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಎಂಬುದು ನಿಮಗೆ ಗೊತ್ತಾ?
ಹೌದು, ಮಹಿಳೆಯರ ಪರ್ಸ್ ನಲ್ಲಿ ಮೇಕ್ ಅಪ್ ಐಟಂ ಸೇರಿದಂತೆ ಅನೇಕ ವಸ್ತುಗಳಿರುತ್ತವೆ. ಅದ್ರಲ್ಲಿ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ ಕೂಡ ಹೆಚ್ಚಿರುತ್ತದೆ. ಟಾಯ್ಲೆಟ್‌ಗಿಂತ, ಪರ್ಸ್‌ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತದೆ.
ಹೆಲ್ತ್ ರಿಸರ್ಚ್ ಅಧ್ಯಯನದ ಪ್ರಕಾರ, ಬ್ಯಾಕ್ಟೀರಿಯಗಳು ಪರ್ಸ್‌ನ ಒಳಗೆ ಮತ್ತು ಹೊರಗೆ ಅವುಗಳ ಮೇಲ್ಮೈಗಳಲ್ಲಿ ಇರುತ್ತವೆ. ಸಂಶೋಧನೆಯಲ್ಲಿ 138 ಪರ್ಸ್ ಗಳನ್ನು ಅಧ್ಯಯನಕ್ಕೆ ಬಳಸಲಾಗಿದೆ. ಅದ್ರಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಪರ್ಸ್‌ಗಳಲ್ಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.
ಪರ್ಸ್ ಗಳನ್ನು ಎಲ್ಲ ಕಡೆ ತೆಗೆದುಕೊಂಡು ಹೋಗ್ತಾರೆ. ಬಾತ್ ರೂಮಿನಿಂದ ಹಿಡಿದು ಬೆಡ್ ರೂಮಿನವರೆಗೆ ಎಲ್ಲೆಡೆ ಪರ್ಸ್ ತೆಗೆದುಕೊಂಡು ಹೋಗ್ತಾರೆ. ಕೊಳಕಾದ ಕೈಗಳಿಂದ ಪರ್ಸ್ ಸ್ಪರ್ಶಿಸ್ತಾರೆ. ಕೈನಲ್ಲಿರುವ ಕೊಳಕು ಪರ್ಸ್ ಗೆ ಪ್ರವೇಶ ಮಾಡುತ್ತದೆ. ಹಾಗೆ ಮೊಬೈಲ್ ಸೇರಿದಂತೆ ಕೆಲ ವಸ್ತುಗಳನ್ನು ಕೊಳಕು ಕೈನಲ್ಲಿ ಮುಟ್ಟಿ ನಂತ್ರ ಪರ್ಸ್ ಒಳಗೆ ಇಡುತ್ತೇವೆ. ಇದ್ರಿಂದಲೂ ಬ್ಯಾಕ್ಟೀರಿಯಾ ಪ್ರವೇಶ ಮಾಡುತ್ತದೆ.
ಪರ್ಸ್‌ಗಳನ್ನು ಮನೆಯ ಇತರ ವಸ್ತುಗಳ ಮೇಲೆ ಇಟ್ಟಾಗ ಅದೂ ಕಲುಶಿತಗೊಳ್ಳುತ್ತದೆ. ಪರ್ಸ್‌ನಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ರೋಗಕಾರಕವಲ್ಲ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾದ ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯಾ ಕಂಡುಬಂದಿದೆ. ಇದು ಮೊದಲೇ ಅನೇಕರ ಚರ್ಮದ ಮೇಲೆ ಇರುತ್ತದೆ.