ಪ್ರತಿ ದಿನದ ಪರಿಶ್ರಮದಿಂದ, ವಿಶ್ರಾಂತಿ ಇಲ್ಲದ ಕೆಲಸಗಳಿಂದ ಕೆಲವು ನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕ್ಕ ಪುಟ್ಟ ನೋವುಗಳಿಗೆ ನೋವು ನಿವಾರಕ ಮಾತ್ರೆ ಸೇವಿಸುವುದು ಅಪಾಯಕಾರಿ. ಅದರಿಂದ ದೇಹಕ್ಕೆ ಸೈಡ್ ಎಫೆಕ್ಟ್ ಆಗುವ ಅಪಾಯವಿದೆ.
ಇಂತಹ ಸಣ್ಣ ಪುಟ್ಟ ನೋವುಗಳಿಗೆ ಮನೆಯಲ್ಲೇ ಇರುವ ವಸ್ತುಗಳಿಂದ ಅಡ್ಡ ಪರಿಣಾಮವಿಲ್ಲದ ಹಾಗೂ ದೇಹಕ್ಕೆ ಶಕ್ತಿ ನೀಡುವ ಮದ್ದುಗಳನ್ನು ತಯಾರಿಸಿ ಬಳಸಬಹುದು.
ಮೈ ಕೈ ನೋವಿದ್ದರೆ ಬಿಸಿ ಹಾಲಿಗೆ ಅರಿಶಿನ ಪುಡಿ ಸೇರಿಸಿ ಕುಡಿಯಬೇಕು. ಹಲ್ಲು ನೋವಿಗೆ ಲವಂಗದೆಣ್ಣೆ ಬಳಸಬೇಕು. ಸಂಧಿವಾತ ಇದ್ದವರು ಹಸಿ ಶುಂಠಿ ಬೆರೆಸಿದ ಗ್ರೀನ್ ಟೀ ಸೇವಿಸುವುದು ಒಳಿತು.
ಪುದೀನಾ ಎಣ್ಣೆಯಿಂದ ತಲೆ ನೋವು ಮಾಯವಾಗುತ್ತದೆ. ಹಾಗೆಯೇ ಬೆನ್ನು ನೋವು ಇದ್ದವರು ಮೊಟ್ಟೆ, ಹಾಲು, ಹಸಿ ತರಕಾರಿ, ಸೊಪ್ಪು, ಡ್ರೈ ಫ್ರೂಟ್ಸ್ ಸೇವಿಸಬೇಕು. ಇನ್ನು ಹೆಣ್ಣು ಮಕ್ಕಳು ಪ್ರತೀ ತಿಂಗಳು ಅನುಭವಿಸುವ ಹೊಟ್ಟೆ ನೋವಿಗೆ ಆ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಆಲೋವೆರಾ ಜೆಲ್ ಗೆ ಜೀರಿಗೆ ಪುಡಿ, ಸ್ವಲ್ಪ ಸಕ್ಕರೆ ಸೇರಿಸಿ ಮೂರು ದಿನಗಳ ಕಾಲ ಸೇವಿಸಬೇಕು.