ಯಾವಾಗಲೂ ಕೆಲಸ ಹಾಗೂ ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲಾಗದೇ ಸಾಕಷ್ಟು ಒತ್ತಡ ಎದುರಿಸುವುದು ನಾವಂದುಕೊಂಡಂತೆ ಆರೋಗ್ಯಕ್ಕೆ ಯಾವಾಗಲೂ ನಕಾರಾತ್ಮಕ ಪ್ರಭಾವ ಬೀರುವುದಿಲ್ಲವಂತೆ.
ಈ ಒತ್ತಡದಿಂದಾಗಿ ವ್ಯಕ್ತಿಗತವಾಗಿ ನಮ್ಮ ವಿಕಸನಕ್ಕೆ ಸಾಕಷ್ಟು ನೆರವಾಗುತ್ತದೆ ಎಂದು ತಿಳಿದ ಸಾಕಷ್ಟು ಮಂದಿಯೂ ಇದ್ದಾರೆ.
ನಮ್ಮ ಉಳಿವಿನ ದೃಷ್ಟಿಯಿಂದ ಸ್ಟ್ರೆಸ್ ಹಾಗೂ ಅದಕ್ಕೆ ನಮ್ಮ ಪ್ರತಿಕ್ರಿಯೆಗಳು ಬಹಳ ಮುಖ್ಯವಾಗಿವೆ ಎಂದು ತಿಳಿಸಿರುವ ನರವಿಜ್ಞಾನಿ ಜೀವನದಲ್ಲಿ ಮುಂಬರುವ ಪರಿಸ್ಥಿತಿಗೆ ಸ್ಟ್ರೆಸ್ ನಿಮ್ಮನ್ನು ಅಣಿಗೊಳಿಸುತ್ತದೆ ಎಂದಿದ್ದಾರೆ.
ವಿಪರೀತ ಸ್ಟ್ರೆಸ್‌ನ ಪರಿಸ್ಥಿತಿಗಳನ್ನು ಎದುರಿಸುವುದರಿಂದ ನಮ್ಮ ಸಾಮರ್ಥ್ಯಗಳಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡು ಬರುವುದಲ್ಲದೇ ಭವಿಷ್ಯದ ಸವಾಲನ್ನು ಎದುರಿಸಲು ಮತ್ತಷ್ಟು ಚೆನ್ನಾಗಿ ಸಿದ್ಧರಾಗಲಿದ್ದೀರಿ ಎಂದು ನರವಿಜ್ಞಾನಿ ತಿಳಿಸಿದ್ದರು.