alex Certify ನವೆಂಬರ್‌ ನಲ್ಲೂ ಕಾಡುತ್ತಿದೆ ವಿಪರೀತ ಸೆಖೆ, ಈ ಬಾರಿ ಚಳಿ ಕೊರತೆಯ ಹಿಂದಿದೆ ಗಂಭೀರ ಕಾರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವೆಂಬರ್‌ ನಲ್ಲೂ ಕಾಡುತ್ತಿದೆ ವಿಪರೀತ ಸೆಖೆ, ಈ ಬಾರಿ ಚಳಿ ಕೊರತೆಯ ಹಿಂದಿದೆ ಗಂಭೀರ ಕಾರಣ….!

ಈ ಬಾರಿ ಮಳೆಯ ಕೊರತೆಯಿಂದಾಗಿ ಅನೇಕ ರಾಜ್ಯಗಳು ಬರಗಾಲ ಎದುರಿಸುತ್ತಿವೆ. ಅದೇ ರೀತಿ ಚಳಿ ಕೂಡ ಕಡಿಮೆಯಾಗುತ್ತಿದೆ. ಇದಕ್ಕೆ  ಜಾಗತಿಕ ಮತ್ತು ಸ್ಥಳೀಯ ಕಾರಣಗಳಿವೆ. ನವೆಂಬರ್ ತಿಂಗಳು ಮುಗಿಯುವ ಹಂತದಲ್ಲಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಉತ್ತರ ಭಾರತದಲ್ಲಂತೂ ಚಳಿಗಾಲ ಆರಂಭವಾಗುತ್ತದೆ. ಈ ವರ್ಷ ಸೌಮ್ಯ ಚಳಿ ಪ್ರವೇಶಿಸಿದ್ದರೂ ಮುಂದಿನ ದಿನಗಳಲ್ಲಿ ತೀವ್ರ ಚಳಿಯ ವಾತಾವರಣ ಕಂಡುಬರುವ ಸಾಧ್ಯತೆ ಕಡಿಮೆ.

ಅಲ್ ನೀನೋ ಎಂಬ ನೈಸರ್ಗಿಕ ವಿದ್ಯಮಾನ ಇದಕ್ಕೆ ಕಾರಣವಾಗಿದೆ. ಇದು ಸಮುದ್ರದ ತಾಪಮಾನದ ಮೇಲೆ ಪರಿಣಾಮ ಬೀರುತ್ತದೆ. ಅಲ್ ನೀನೊ ಸಮಯದಲ್ಲಿ, ಸಮುದ್ರದ ಉಷ್ಣತೆಯು ಹೆಚ್ಚಾಗುತ್ತದೆ. ಇದು ವಾತಾವರಣದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಈ ಬದಲಾವಣೆಗಳಿಂದಾಗಿ ಶೀತವು ಕಡಿಮೆಯಾಗುತ್ತದೆ.

ತೀವ್ರ ಚಳಿ ಏಕಿಲ್ಲ?

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ವಾಯುಮಾಲಿನ್ಯ ಸಹ ಸೌಮ್ಯವಾದ ಚಳಿಗಾಲಕ್ಕೆ ಕಾರಣವಾಗಿವೆ. ದೆಹಲಿಯಲ್ಲಿ ವಾಯು ಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ. ವಾಯು ಮಾಲಿನ್ಯದಿಂದಾಗಿ ವಾತಾವರಣದಲ್ಲಿ ಧೂಳು ಮತ್ತು ಹೊಗೆಯ ಪ್ರಮಾಣ ಹೆಚ್ಚಿದೆ.

ವಾಸ್ತವವಾಗಿ ವಾಯು ಮಾಲಿನ್ಯವು ತಾಪಮಾನದೊಂದಿಗೆ ನೇರ ಸಂಪರ್ಕವನ್ನು ಹೊಂದಿಲ್ಲ. ಆದರೆ ವಾಯು ಮಾಲಿನ್ಯದ ಜೊತೆಗೆ ತೇವಾಂಶವು ಬಂದಾಗ ಸಮಸ್ಯೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ  ಶಾಖವು ವಾತಾವರಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಮತ್ತು ತಾಪಮಾನ ಕಡಿಮೆಯಾಗುವುದಿಲ್ಲ. ಈ ಕಾರಣದಿಂದಾಗಿ  ಶಾಖ ರಾತ್ರಿ ಕೂಡ ಇರುತ್ತದೆ.

ಎಲ್ ನಿನೋ ಪರಿಣಾಮ ಎಂದರೇನು ?

ಅಲ್ ನೀನೊ ವರ್ಷಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದಾಗ್ಯೂ ಅಲ್ ನೀನೊದ ಗರಿಷ್ಠ ಪರಿಣಾಮವು ಮಾರ್ಚ್-ಏಪ್ರಿಲ್ ವೇಳೆಗೆ ಗೋಚರಿಸುವ ಸಾಧ್ಯತೆಯಿದೆ. ಇದು ತುಂಬಾ ತಣ್ಣಗಾಗಲು ಬಿಡುವುದಿಲ್ಲ. ಇದರ ಎಫೆಕ್ಟ್‌ನಿಂದಾಗಿ ಈ ಬಾರಿ ಪ್ರತಿ ವರ್ಷದಂತೆ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಚಳಿಯಾಗದೇ ಇರಬಹುದು. ಫೆಬ್ರವರಿಯಲ್ಲೇ ತೀವ್ರ ಸೆಖೆಗಾಲ ಕಾಡುವ ಸಾಧ್ಯತೆ ಇದೆ.

ಚಳಿಗಾಲದ ತೀವ್ರತೆ ಕಡಿಮೆಯಾಗಲು ಜಾಗತಿಕ ತಾಪಮಾನವೂ ಕಾರಣವಾಗಿದೆ. ಪರಿಸರದಲ್ಲಿರುವ ಹಸಿರು ಮನೆ ಅನಿಲಗಳಾದ ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವರದಿ ಪ್ರಕಾರ ಜಾಗತಿಕ ತಾಪಮಾನ ಏರಿಕೆಗೆ ಭಾರತದ ಕೊಡುಗೆ ಕೇವಲ ಶೇ.5ರಷ್ಟಿದೆ. ಅಮೆರಿಕ ಮತ್ತು ಚೀನಾ ತಾಪಮಾನ ಏರಿಕೆಗೆ ಕಾರಣವಾಗುತ್ತಿವೆ. ಅದರ ಪ್ರಭಾವ ಭಾರತದ ಮೇಲೂ ಆಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...