ಅಂತರ್ಜಾಲದಲ್ಲಿ ಸದ್ಯಕ್ಕೆ ವರ್ಡ್ಲ್ ಎಂಬ ಪದಗಳ ಆಟವೊಂದು ಭಾರೀ ವೈರಲ್ ಆಗಿದೆ. ಚಟದಂತೆ ಅಂಟಬಲ್ಲ ಈ ಆಟದಲ್ಲಿ ನೀವು ಪ್ರತಿನಿತ್ಯ ಐದಕ್ಷರಗಳ ಪದವೊಂದನ್ನು ಪ್ರತಿನಿತ್ಯ ಐದು ಯತ್ನಗಳ ಒಳಗೆ ಅಂದಾಜು ಮಾಡಬೇಕು.
ಈ ಟ್ರೆಂಡಿಂಗ್ ಗೇಮ್ ಅನ್ನೇ ಥೀಂ ಮಾಡಿಕೊಂಡಿರುವ ಅಮೂಲ್ ಬೇಬಿ ಹೀಗೊಂದು ಡೂಡಲ್ ಜೊತೆಗೆ ಬಂದಿದ್ದಾಳೆ. ತಾನೂ ಮೂರೇ ಯತ್ನಗಳಲ್ಲಿ ’GREAT’ ಪದವನ್ನು ಗೆಸ್ ಮಾಡಿದ್ದಾಗಿ ಅಮೂಲ್ ಬೇಬಿ ಹೇಳುತ್ತಿದ್ದಾಳೆ.
ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ `ಗ್ಲೋಬಲ್ ಅಚಿವರ್ಸ್ʼ ಪ್ರಶಸ್ತಿ
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅಮೂಲ್ ಬೇಬಿಯ ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ ನೆಟ್ಟಿಗರ ಪೈಕಿ ಒಂದು ವರ್ಗದ ಮಂದಿ ಆಟದಲ್ಲಿ ತೋರಿರುವ ವಿವರಗಳು ಸರಿಯಾಗಿಲ್ಲ ಎಂದಿದ್ದಾರೆ. ನಿಮಗೆ ಇದೇನೆಂದು ಹೇಳುವ ಮುನ್ನ ಆಟದ ನಿಯಮಗಳು ಹೀಗಿವೆ:
ನಿಯಮಗಳು ಸರಳವಾಗಿದೆ. ಆಟಗಾರನು ಪದದ ಭಾಗವಾಗಿದ್ದ ಅಕ್ಷರವನ್ನು ಪಡೆದರೆ, ಟೈಲ್ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಟಗಾರನು, ಪದದಲ್ಲಿರುವ ಅಕ್ಷರವನ್ನು ಊಹಿಸಿದರೆ ಮತ್ತು ಸ್ಥಾನವು ಸರಿಯಾಗಿದ್ದರೆ, ಟೈಲ್ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆಟಗಾರನು ಬೇರೆ ಯಾವುದನ್ನಾದರೂ ಊಹಿಸಿದರೆ, ಟೈಲ್ ಬೂದು ಬಣ್ಣಕ್ಕೆ ತಿರುಗುತ್ತದೆ. ನೀವು ಈಗ ದೋಷವನ್ನು ಗುರುತಿಸಬಹುದೇ? ನಿಮಗೆ ಈ ಸುಳಿವುಗಳು ಇನ್ನಷ್ಟು ಸಹಾಯ ಮಾಡುತ್ತವೆ.
ವರ್ಡ್ಲ್ ಅನ್ನು ಬ್ರೂಕ್ಲಿನ್‌ನ ಸಾಫ್ಟ್‌ವೇರ್ ಇಂಜಿನಿಯರ್ ಜೋಶ್ ವಾರ್ಡಲ್ ಕಂಡುಹಿಡಿದಿದ್ದಾರೆ. ಇದರಲ್ಲಿನ ಉತ್ತಮ ಭಾಗವೆಂದರೆ ನೀವು ಊಹಿಸಬೇಕಾದ ಪದವು ಇಂಗ್ಲಿಷ್ ಭಾಷೆಯಲ್ಲಿ ಯಾವುದಾದರೂ ಆಗಿರಬಹುದು. ಈ ಶಬ್ದಕೋಶದ ಆಟ ಮತ್ತೊಂದು ವೈಶಿಷ್ಟ್ಯವೆಂದರೆ, ದಿನಕ್ಕೆ ಒಂದೇ ಒಂದು ವರ್ಡ್ಲ್ ಮಾತ್ರ ಆಡಲು ಸಾಧ್ಯ.