ಗಂಟಲಿನಲ್ಲಿ ಕಾಣಿಸಿಕೊಳ್ಳುವ ತುರಿಕೆ ವಿಪರೀತ ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮೆ ಇದು ವಿಪರೀತ ಕೆಮ್ಮಿಗೆ ಕಾರಣವಾಗಿ ನಿಮ್ಮ ನಿದ್ದೆಯನ್ನು ಕಸಿಯಬಹುದು. ಅದನ್ನು ತಪ್ಪಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ.
ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ. ಇದನ್ನು ಬೆಳಿಗ್ಗೆ ಹಾಗೂ ಸಂಜೆ ವೇಳೆ ಎರಡರಿಂದ ನಾಲ್ಕು ನಿಮಿಷ ಮಾಡುವುದರಿಂದ ಎರಡೇ ದಿನದಲ್ಲಿ ಗಂಟಲು ನೋವು ನಿವಾರಣೆಯಾಗುತ್ತದೆ.
ಆಗಾಗ ಬಿಸಿ ಬಿಸಿ ನೀರು, ಸೂಪ್, ಬೆಚ್ಚಗಿನ ಚಹಾ ಕುಡಿಯುವುದರಿಂದಲೂ ಗಂಟಲ ಕಿಚ್ ಕಿಚ್ ದೂರವಾಗುತ್ತದೆ. ಹಾಗೆಂದು ಕಾಫಿ ಅಥವಾ ಆಲ್ಕೋಹಾಲ್ ಸೇವಿಸುವುದರಿಂದ ಗಂಟಲು ಮತ್ತಷ್ಟು ಒಣಗುತ್ತದೆ.
ಚಹಾ ಕುಡಿಯುವಾಗ ಅದಕ್ಕೆ ಸಕ್ಕರೆ ಬದಲು ಒಂದು ಚಮಚ ಜೇನುತುಪ್ಪ ಸೇರಿಸಿ. ಇದರಿಂದ ಗಂಟಲು ಒಣಗುವ ಸಮಸ್ಯೆ ದೂರವಾಗುತ್ತದೆ. ಇದು ನಿಮ್ಮ ಗಂಟಲನ್ನು ತೇವವಾಗಿಡುತ್ತದೆ.