alex Certify ಪೂಜೆಯ ವೇಳೆ ಧೂಪ ಬೆಳಗುವುದರ ಹಿಂದಿದೆ ವಿಶಿಷ್ಟ ನಂಬಿಕೆ…… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂಜೆಯ ವೇಳೆ ಧೂಪ ಬೆಳಗುವುದರ ಹಿಂದಿದೆ ವಿಶಿಷ್ಟ ನಂಬಿಕೆ……

ವಿಶೇಷ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ, ಹಬ್ಬಗಳಲ್ಲಿ ದೇವರ ಎದುರು ದೀಪದ ಜೊತೆಗೆ ಧೂಪವನ್ನೂ ಬೆಳಗುವ ಸಂಪ್ರದಾಯವಿದೆ. ಅದರ ಮಹತ್ವ ಅನೇಕರಿಗೆ ತಿಳಿದಿಲ್ಲ. ಮನೆ ಅಥವಾ ಕಚೇರಿಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ಇದ್ದರೆ, ಮನೆಯಲ್ಲಿ ವಾಸ್ತು ದೋಷವಿದ್ದರೆ ಅವನ್ನೆಲ್ಲ ಧೂಪ-ದೃವ್ಯ ನಿವಾರಿಸುತ್ತದೆ ಎಂಬ ನಂಬಿಕೆಯಿದೆ.

ಹಿಂದೂ ಧರ್ಮದಲ್ಲಿ ಧೂಪವನ್ನು ಅರ್ಪಿಸುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ಇದೆ. ಧಾರ್ಮಿಕ ಗ್ರಂಥಗಳ ಪ್ರಕಾರ  ಧೂಪವನ್ನು ಸುಡುವ ಮೂಲಕ ದೇವರನ್ನು ಪೂಜಿಸುವುದು ವಿಶೇಷ ಫಲಿತಾಂಶವನ್ನು ನೀಡುತ್ತದೆ. ಇದು ಅಶುಭ ಪರಿಣಾಮಗಳನ್ನು ನಾಶಮಾಡುತ್ತದೆ. ನಕಾರಾತ್ಮಕತೆ ನಿವಾರಣೆಯಾಗುತ್ತದೆ.

ಸಾಮಾನ್ಯವಾಗಿ ಎರಡು ರೀತಿಯ ಧೂಪದ್ರವ್ಯವನ್ನು ಬಳಸಲಾಗುತ್ತದೆ.  ಮೊದಲನೆಯದು ಗುಗ್ಗುಲು ಮತ್ತು ಕರ್ಪೂರದ ಮಿಶ್ರಣ. ಎರಡನೆಯ ವಿಧಾನದಲ್ಲಿ ಉರಿಯುತ್ತಿರುವ ಬತ್ತಿಯ ಮೇಲೆ ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ಸುಡಲಾಗುತ್ತದೆ. ಧೂಪವನ್ನು ಬೆಳಗಲು ಕೂಡ ಕೆಲವು ನಿಯಮಗಳಿವೆ. ಅವನ್ನು ಪಾಲಿಸಬೇಕು.

ಧೂಪವನ್ನು ಹಚ್ಚುವ ಮೊದಲು ಅಂದರೆ ಪೂಜೆ ಮಾಡುವ ಮೊದಲು ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಸ್ನಾನ ಇತ್ಯಾದಿಗಳನ್ನು ಮಾಡಿ ಶುದ್ಧೀಕರಿಸಿದ ನಂತರವೇ ಧೂಪ ಬೆಳಗಬೇಕು.

ಧೂಪದ್ರವ್ಯದ ಸುವಾಸನೆ ಮನೆಯ ಪ್ರತಿಯೊಂದು ಕೋಣೆಗೂ  ತಲುಪುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಪ್ರತಿ ಕೋಣೆಯ ವಾತಾವರಣ ಶುದ್ಧವಾಗುತ್ತದೆ.

ಧೂಪವನ್ನು ಅರ್ಪಿಸಿದ ನಂತರ ಅದರ ಪರಿಣಾಮ ಮನೆಯಲ್ಲಿದ್ದಾಗ ಯಾವುದೇ ರೀತಿಯ ಚಲನಚಿತ್ರ ಸಂಗೀತ ಇತ್ಯಾದಿಗಳನ್ನು ನುಡಿಸಬಾರದು ಮತ್ತು ಭಜನೆ ಕೀರ್ತನೆ ಮಾಡಬಾರದು.

ಪ್ರತಿದಿನ ಧೂಪ ಹಚ್ಚಲು ಸಾಧ್ಯವಾಗದೇ ಇದ್ದರೆ ಏಕಾದಶಿ, ತ್ರಯೋದಶಿ, ಚತುರ್ದಶಿ, ಅಮವಾಸ್ಯೆ ಮತ್ತು ಪೂರ್ಣಿಮೆಯಂದು ಹಚ್ಚಬಹುದು. ಬೆಳಗ್ಗೆ ಅರ್ಪಿಸುವ ಧೂಪವು ದೇವತೆಗಳಿಗೆ ಮೀಸಲಾಗಿದ್ದರೆ, ಸಂಜೆಯ ಧೂಪ ಪೂರ್ವಜರಿಗೆ ಮೀಸಲಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...