alex Certify ಗುಜರಾತ್‌ನಲ್ಲಿದೆ ಮೃತ ಮಹಿಳೆಯರ ಶ್ರಾದ್ಧಕ್ಕೆ ಮೀಸಲಾದ ವಿಶೇಷ ಸ್ಥಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್‌ನಲ್ಲಿದೆ ಮೃತ ಮಹಿಳೆಯರ ಶ್ರಾದ್ಧಕ್ಕೆ ಮೀಸಲಾದ ವಿಶೇಷ ಸ್ಥಳ….!

ಹಿಂದೂ ಧರ್ಮದಲ್ಲಿ ಶ್ರಾದ್ಧಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಸತ್ತವರ ಆತ್ಮಕ್ಕೆ ಶಾಂತಿ ಮತ್ತು ತೃಪ್ತಿಗಾಗಿ ನಿರ್ದಿಷ್ಟ ದಿನಾಂಕಗಳಂದು ನಿರ್ದಿಷ್ಟ ಸ್ಥಳಗಳಲ್ಲಿ ಪೂರ್ವಜರಿಗೆ ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ಒಬ್ಬ ವ್ಯಕ್ತಿಯ ಶ್ರಾದ್ಧವನ್ನು ಸಂಪೂರ್ಣ ಭಕ್ತಿಯಿಂದ ಮತ್ತು ನಿಯಮಗಳೊಂದಿಗೆ ಮಾಡದಿದ್ದರೆ ಸತ್ತ ವ್ಯಕ್ತಿಗೆ ಸಂಪೂರ್ಣ ಮೋಕ್ಷ ಸಿಗುವುದಿಲ್ಲ ಎಂದು ನಂಬಲಾಗಿದೆ.

ಪಿತೃ ಪಕ್ಷದ ಸಮಯದಲ್ಲಿ, ಪೂರ್ವಜರನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರ ಯೋಗಕ್ಷೇಮವನ್ನು ಬಯಸಿ ಅವರಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಭಾರತದಲ್ಲಿ ಅಂತ ಅನೇಕ ಸ್ಥಳಗಳಿವೆ. ಅಲ್ಲಿ ವರ್ಷದ ಯಾವುದೇ ಸಮಯದಲ್ಲಿ ಇಂತಹ ಆಚರಣೆಗಳನ್ನು ಮಾಡಬಹುದು.

ಆದರೆ ಭಾರತದಲ್ಲಿ ಸತ್ತ ಮಹಿಳೆಯರಿಗೆ ಮಾತ್ರ ಶ್ರಾದ್ಧ ಮಾಡುವ ಏಕೈಕ ಸ್ಥಳವಿದೆ. ಗಯಾ ಪಿತೃ ಶ್ರಾದ್ಧಕ್ಕೆ ಪ್ರಸಿದ್ಧವಾದರೆ, ಗುಜರಾತ್‌ನ ಸಿಧ್‌ಪುರದಲ್ಲಿರುವ ಬಿಂದು ಸರೋವರ ಮಾತೃ ಶ್ರಾದ್ಧಕ್ಕೆ ಹೆಸರುವಾಸಿಯಾಗಿದೆ.

ಬಿಂದು ಸರೋವರವು ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿದೆ. ಇದು ಸಿದ್ಧ ಸ್ಥಳ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಮೃತ ಮಹಿಳೆಯರ ಶ್ರಾದ್ಧ ಮಾಡುವ ಸ್ಥಳವಿದು. ಋಗ್ವೇದದಲ್ಲಿಯೂ ಸಿದ್ಧಪುರದ ವಿವರಣೆಯಿದೆ. ಇಲ್ಲಿ ಸತ್ತ ಸ್ತ್ರೀಯರ ಶ್ರಾದ್ಧ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಅವರ ಆತ್ಮವು ಶಾಂತಿಯನ್ನು ಕಂಡುಕೊಳ್ಳುತ್ತದೆ.

ಮಾತೃ ತರ್ಪಣವನ್ನು ಬಿಂದು ಸರೋವರದ ಸುತ್ತ ಮಾತ್ರ ನಡೆಸಲಾಗುತ್ತದೆ. ಇಲ್ಲಿ ಪುರಾತನವಾದ ಮೆಟ್ಟಿಲುಬಾವಿ ಇದೆ. ಇದು ಭಾರತದ ಐದು ಪವಿತ್ರ ಮತ್ತು ಪುರಾತನ ಸರೋವರಗಳಲ್ಲಿ ಒಂದಾಗಿದೆ. ಇದು 40 ಚದರ ಅಡಿಯ ಕೊಳ. ಅದರ ಸುತ್ತಲೂ ಶಾಶ್ವತ ಘಾಟ್‌ಗಳನ್ನು ನಿರ್ಮಿಸಲಾಗಿದೆ. ಬಿಂದು ಸರೋವರದಲ್ಲಿ ಸ್ನಾನ ಮಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ.

ಅಷ್ಟೇ ಅಲ್ಲ ಬಿಂದು ಸರೋವರವು ಪಿಂಡ ದಾನಕ್ಕೆ ಸಹ ಅತ್ಯಂತ ಸೂಕ್ತ ಸ್ಥಳ. ಇಲ್ಲಿ ಪಿಂಡವನ್ನು ದಾನ ಮಾಡುವುದರಿಂದ ಮೃತ ಮಹಿಳೆಯರಿಗೆ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮಾತೃಗಾಯ ತೀರ್ಥ ಎಂದು ಕರೆಯಲ್ಪಡುವ ಸಿದ್ಧಪುರವು ಮಗ ತಾಯಿಯ ಋಣವನ್ನು ತೀರಿಸುವ ಸ್ಥಳವೆಂದೇ ಪ್ರಸಿದ್ಧವಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...