ಪೀರಿಯಡ್ಸ್ ಸಮಯದಲ್ಲಿ ವಿಪರೀತ ರಕ್ತಸ್ರಾವವಾಗುತ್ತಿದೆಯೇ, ಇದರಿಂದ ನಿಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ.
ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯೂ ಇದಕ್ಕೆ ಕಾರಣವಿರಬಹುದು. ಪೀರಿಯಡ್ಸ್ ಸಮಯದಲ್ಲಿ ಪಪ್ಪಾಯಿ ಸೇವನೆಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು ಎನ್ನಲಾಗುತ್ತದೆ.
ಈ ಸಮಯದಲ್ಲಿ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಒಂದು ಲೋಟ ನೀರಿಗೆ ಒಂದು ಚಮಚ ಸೋಂಪು ಕಾಳು ಹಾಕಿ ಕುದಿಸಿ. ತಣಿದ ಬಳಿಕ ಕುಡಿಯಿರಿ. ಇದರಿಂದ ಅನಿಯಮಿತ ದಿನಗಳಲ್ಲಿ ಪೀರಿಯಡ್ಸ್ ಆಗುವ ಸಮಸ್ಯೆಯೂ ದೂರವಾಗುತ್ತದೆ.
ಮೆಂತೆ ಕಾಳಿನ ಉಂಡೆ ಅಥವಾ ಕಷಾಯ ಸೇವಿಸಿದರೆ ವಿಪರೀತ ಸ್ರಾವದೊಂದಿಗೆ ಹೊಟ್ಟೆ ಬೆನ್ನಿನ ನೋವಿನ ಸಮಸ್ಯೆಯೂ ದೂರವಾಗುತ್ತದೆ.
ಕೊತ್ತಂಬರಿ ನೆನೆಸಿಟ್ಟ ನೀರು, ನೆಲ್ಲಿಕಾಯಿ, ಕಿತ್ತಳೆ ಹಣ್ಣಿನ ಸೇವನೆಯಿಂದಲೂ ಪೀರಿಯಡ್ಸ್ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಇವುಗಳಿಂದಲೂ ನಿಮ್ಮ ಸಮಸ್ಯೆ ನಿವಾರಣೆಯಾಗದಿದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.