ಆಧುನಿಕ ಜೀವನ ಶೈಲಿಯ ಪರಿಣಾಮ ಹೆಚ್ಚಿನ ಮಂದಿಯನ್ನು ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆ. ಸೇವಿಸುವ ಆಹಾರದಲ್ಲಿ ಕೊಂಚ ಬದಲಾವಣೆ ಆದರೆ ಸಾಕು ಆರೋಗ್ಯದಲ್ಲೂ ಏರುಪೇರಾಗುತ್ತದೆ. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕೆಲವು ಮನೆಮದ್ದುಗಳ ಇಲ್ಲಿವೆ.
ಮೂಲಂಗಿ ಪೈಲ್ಸ್ ಗೆ ಅತ್ಯುತ್ತಮ ಮದ್ದು. ನಿಮ್ಮ ವೈದ್ಯರು ಹೇಳುವಂತೆ ಮೂಲಂಗಿಯನ್ನು ವಾರಕ್ಕೆ ಮೂರು ಬಾರಿ ಸೇವಿಸಿ. ಕಡಿಮೆ ಮಸಾಲೆ ಬೆರೆಸಿ ಇವುಗಳನ್ನು ಸೇವಿಸುವುದನ್ನು ಮರೆಯದಿರಿ.
ಪೈಲ್ಸ್ ರೋಗಿಗಳು ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಕುಡಿಯುವುದು ಬಹಳ ಮುಖ್ಯ. ಈ ರೋಗಿಗಳಿಗೆ ಮಲಬದ್ಧತೆ ಸಮಸ್ಯೆ ಕಾಡಿದರೆ ಅದರೊಂದಿಗೆ ರಕ್ತ ವಿಸರ್ಜನೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ಹೆಚ್ಚಿನ ಫೈಬರ್ ಯುಕ್ತ ಪದಾರ್ಥಗಳನ್ನು ಸೇವಿಸಿ ಮಲಬದ್ಧತೆ ಆಗದಂತೆ ನೋಡಿಕೊಳ್ಳಿ.
ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ಆ ಜಾಗ ಉರಿಯುವುದು ಮತ್ತು ನೋಯುವುದು ಕಡಿಮೆಯಾಗುತ್ತದೆ. ಹಸಿ ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿಂದರೆ ರಕ್ತಸ್ರಾವ ನಿಲ್ಲುತ್ತದೆ. ಮಜ್ಜಿಗೆ, ರಾಗಿ ಅಂಬಲಿ, ಕ್ಯಾರೆಟ್ ಜ್ಯೂಸ್ ಕುಡಿಯಿರಿ.