
ಸೂರ್ಯನ ಕಂದು ತೆಗೆಯುವಿಕೆಯನ್ನು ನಿಭಾಯಿಸಲು ಹಲವು ಫೇಶಿಯಲ್ ಗಳು ಮತ್ತು ಇತರ ಕಾರ್ಯ ವಿಧಾನಗಳು ಇವೆ. ಆದರೆ ಮನೆ ಪರಿಹಾರವನ್ನು ಪಡೆಯುವುದಕ್ಕಿಂತ ಇವು ಉತ್ತಮವಲ್ಲ.
ಮನೆ ಪರಿಹಾರಗಳು ಚರ್ಮಕ್ಕೆ ಪೋಷಣೆ ಒದಗಿಸುತ್ತದೆ. ಜೊತೆಗೆ ಆರೋಗ್ಯಕ ವರ್ಧಕವನ್ನು ನೀಡುತ್ತದೆ.
ಮೊಸರು ಮತ್ತು ಟೊಮೆಟೊ ಪ್ಯಾಕ್
2 ಚಮಚ ಟೊಮೆಟೊ ತಿರುಳು, 1 ಚಮಚ ನಿಂಬೆರಸ ಮತ್ತು 1 ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಪ್ಯಾಕನ್ನು ಮುಖ ಮತ್ತು ಕೈಗಳಿಗೆ ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಬೇಕು.
ಹಾಲು ಮತ್ತು ಅರಿಶಿಣ
ಹಾಲಿಗೆ ಚಿಟಿಕೆಯಷ್ಟು ಅರಿಶಿಣ ಹಾಕಿ ಚರ್ಮಕ್ಕೆ ಲೇಪಿಸಿ. ಒಣಗಿದ ನಂತರ ತಣ್ಣೀರಿನಲ್ಲಿ ಸಂಪೂರ್ಣವಾಗಿ ತೊಳೆಯಬೇಕು.
ಪಪ್ಪಾಯ ಮತ್ತು ಜೇನುತುಪ್ಪ
ಪಪ್ಪಾಯ ತಿರುಳಿಗೆ ಜೇನುತುಪ್ಪ ಸೇರಿಸಿ ರುಬ್ಬಿಕೊಂಡ ನಂತರ ಪೇಸ್ಟನ್ನು ಟ್ಯಾನ್ ಆದ ಜಾಗಕ್ಕೆ ಹಚ್ಚಿ. 20 ನಿಮಿಷಗಳ ಬಳಿಕ ಸ್ವಚ್ಛ ಮಾಡಬೇಕು.
ಬಾದಾಮಿ
ನೆನೆಸಿ ಸಿಪ್ಪೆ ಸುಲಿದ ಬಾದಾಮಿಯನ್ನು ಹಾಲಿನೊಂದಿಗೆ ರುಬ್ಬಿಕೊಳ್ಳಬೇಕು. ತಯಾರಿಸಿದ ಪೇಸ್ಟನ್ನು ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಬೇಕು.
ನಿಂಬೆ ರಸ
ಒಂದು ಬೇಸಿನ್ ನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಬೇಕು. ಅದಕ್ಕೆ ನಿಂಬೆ ರಸ ಹಿಂಡಿ ಕೈಗಳನ್ನು ಆ ನೀರಿಗೆ ಅದ್ದಬೇಕು. ಸ್ವಲ್ಪ ಹೊತ್ತಿನ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.
ಸೌತೆಕಾಯಿ
2 ಚಮಚ ಸೌತೆಕಾಯಿ ರಸವನ್ನು 1 ಚಮಚ ನಿಂಬೆ ರಸಕ್ಕೆ ಸೇರಿಸಿ ಚಿಟಿಕೆ ಅರಿಶಿನ ಹಾಕಿ ಪೇಸ್ಟ್ ಮಾಡಿಕೊಳ್ಳ ಬೇಕು. ಟ್ಯಾನ್ ಆದ ಭಾಗಕ್ಕೆ ಪೇಸ್ಟ್ ಅನ್ನು ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆಯಬೇಕು.