ಮೈಗ್ರೇನ್ ಸಮಸ್ಯೆಗೆ ವೈದ್ಯರ ಮದ್ದು ಮಾಡಿ ಮಾಡಿ ಬೇಸತ್ತಿದ್ದೀರೇ… ತಲೆ ನೋವು ನಿಮ್ಮನ್ನು ಬಿಟ್ಟು ಹೋಗುವ ಲಕ್ಷಣ ಕಾಣುತ್ತಿಲ್ಲವೇ ಚಿಂತೆ ಬಿಡಿ. ಇಲ್ಲಿದೆ ತಲೆನೋವು ಕಡಿಮೆ ಮಾಡುವ ಮನೆ ಮದ್ದುಗಳು.
ಮೈಗ್ರೇನ್ ಸಮಸ್ಯೆ ಬಂದರೆ ಊಟ ತಿಂಡಿ ಸೇವಿಸುವುದು ಬಿಡಿ, ಸರಿಯಾಗಿ ಕುತ್ತಿಗೆ ತಿರುಗಿಸಲೂ ಆಗದಷ್ಟು ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ವಾಂತಿಯೂ ಆಗುವುದುಂಟು. ಇದಕ್ಕೆ ಅತ್ಯುತ್ತಮ ಉಪಾಯ ಎಂದರೆ ಉಗುರು ಬೆಚ್ಚಗಿನ ನೀರಿಗೆ ಸೈಂಧವ ಲವಣ ಹಾಕಿ ಅರ್ಧ ನಿಂಬೆ ಹಣ್ಣಿನ ರಸ ಹಿಂಡಿ ಆ ನೀರನ್ನು ಕುಡಿಯಿರಿ. ಇದರಿಂದ ತಲೆನೋವು ಬಹಳ ಬೇಗ ಕಡಿಮೆಯಾಗುತ್ತದೆ.
ಲಿಂಬೆ ಹಣ್ಣಿನ ರಸದಲ್ಲಿರುವ ಪೊಟ್ಯಾಶಿಯಂ ಒತ್ತಡಕ್ಕೆ ಸಂಬಂಧಿಸಿದ ತಲೆನೋವನ್ನು ಕಡಿಮೆ ಮಾಡುತ್ತದೆ. ಸೈಂಧವ ಲವಣದಲ್ಲಿ ನೋವು ನಿವಾರಕ ಗುಣವಿದ್ದು ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ಈ ಪಾನೀಯ, ರಕ್ತದ ಚಲನೆಯನ್ನು ಹೆಚ್ಚಿಸುತ್ತದೆ. ಕೆಟ್ಟ ಜೀವಾಣುಗಳನ್ನು ತೊಡೆದು ಹಾಕುತ್ತದೆ.
ಹೀಗಾಗಿ ಎರಡರಿಂದ ಮೂರು ಗಂಟೆಗೊಮ್ಮೆ ಇದನ್ನು ತಯಾರಿಸಿ ಕುಡಿಯುವುದರಿಂದ ಮೈಗ್ರೇನ್ ನ ತಲೆನೋವು ದೂರವಾಗುತ್ತದೆ.