ಹೆಚ್ಚಿನ ಮಹಿಳೆಯರು ಬಿಳಿ ಸೆರಗು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಅದು ತೀವ್ರತರವಾಗಿ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಹಾಗಿರದು. ಆದರೆ ಇದನ್ನು ಸರಿಪಡಿಸಲು ಕೆಲವೊಂದು ಮನೆಮದ್ದನ್ನು ಪ್ರಯತ್ನಿಸಿ ನೋಡಬಹುದು.
ಬಿಳಿಸೆರಗು ಅಥವಾ ವೈಟ್ ಡಿಸ್ಚಾರ್ಜ್ ಸಮಸ್ಯೆ ಇರುವವರು ನಿತ್ಯ ಮೆಂತೆ ನೆನೆಸಿದ ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ತುಳಸಿ ನೆನೆಸಿದ ನೀರನ್ನು ಕುಡಿಯುವುದರಿಂದ, ಹಾಲಿಗೆ ತುಳಸಿ ಬೆರೆಸಿ ಕುಡಿಯುವುದರಿಂದಲೂ ನೀವು ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಬೆಂಡೆಕಾಯಿಯನ್ನು ತುಸು ಬಾಡಿಸಿ ಮೊಸರಿನೊಂದಿಗೆ ಸೇವಿಸುವುದರಿಂದಲೂ ಈ ಸಮಸ್ಯೆ ನಿವಾರಣೆಯಾಗುತ್ತದೆ.
ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿದ್ದು ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಇದನ್ನು ನೇರವಾಗಿ ಸೇವಿಸುವುದರಿಂದ ಹಾಗೂ ಇದರ ಪುಡಿಯನ್ನು ಬಳಸುವುದರಿಂದ ಬಿಳಿಸೆರಗಿನ ಸಮಸ್ಯೆಯನ್ನು ದೂರ ಮಾಡಬಹುದು.
ಅಕ್ಕಿ ಕುದಿಯುವಾಗ ಸಿಗುವ ನೀರು, ಪೇರಳೆ ಎಲೆಯನ್ನು ಕುದಿಸಿದ ನೀರಿನ ಸೇವನೆಯಿಂದಲೂ ಈ ಸಮಸ್ಯೆ ದೂರ ಮಾಡಬಹುದು. ಹೀಗಿದ್ದೂ ಡಿಸ್ಚಾರ್ಜ್ ದುರ್ವಾಸನೆಯಿಂದ ಕೂಡಿದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.