ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. ಇದು ನಿದ್ರೆಯನ್ನು ದೂರ ಮಾಡುತ್ತದೆ.
ಇದನ್ನು ಪರಿಹರಿಸುವ ಕೆಲವು ಮನೆ ಮದ್ದುಗಳು ಇಲ್ಲಿವೆ. ಕಾಲುಗಳಿಗೆ ಸಂಪೂರ್ಣವಾಗಿ ಗ್ಲಿಸರಿನ್ ಹಚ್ಚಿ. ನಿತ್ಯ ಮಲಗುವ ಮುನ್ನ ಕಾಲುಗಳನ್ನು ಸ್ವಚ್ಛವಾಗಿ ತೊಳೆದು ಗ್ಲಿಸರಿನ್ ಹಚ್ಚಿ, ಮರುದಿನ ಎದ್ದಾಕ್ಷಣ ಮತ್ತೆ ತೊಳೆಯಿರಿ. ಇದರಿಂದ ಕಾಲಿನ ಸುಸ್ತು ಬಹುಪಾಲು ಕಡಿಮೆಯಾಗುತ್ತದೆ.
ಹಿಮ್ಮಡಿ ಸಹಿತ ಪಾದದಲ್ಲೂ ನೋವಿದ್ದರೆ ಬೆಚ್ಚಗಿನ ನೀರಿಗೆ ಚಿಟಿಕೆ ಅಡುಗೆ ಸೋಡಾ ಹಾಕಿ ಅದರಲ್ಲಿ ಕಾಲಿಟ್ಟು 20 ನಿಮಿಷ ಕುಳಿತುಕೊಳ್ಳಿ. ಬಳಿಕ ಕಾಲು ಹೊರ ತೆಗೆದು ಸ್ವಚ್ಛವಾಗಿ ಒರೆಸಿ. ತೆಂಗಿನೆಣ್ಣೆ ಅಥವಾ ಮಾಯಿಸ್ಚರೈಸರ್ ನಿಂದ ಮಸಾಜ್ ಮಾಡಿ.
ಬಿಸಿನೀರಿಗೆ ಉಪ್ಪು ಹಾಕಿ ಕಾಲಿಟ್ಟರೂ ಇದೇ ಪ್ರಯೋಜನ ದೊರೆಯುತ್ತದೆ. ನಿತ್ಯ ನಿಯಮಿತ ಅವಧಿಯ ವಾಕಿಂಗ್ ಮಾಡುವುದನ್ನು ಮರೆಯದಿರಿ. ತರಕಾರಿ, ಹಣ್ಣು, ಸೊಪ್ಪುಗಳ ಸೇವನೆಯ ಮೂಲಕ ದೇಹದಲ್ಲಿ ವಿಟಮಿನ್ ಗಳನ್ನು ಹೆಚ್ಚಿಸಿಕೊಳ್ಳಿ. ಹೀಗಿದ್ದೂ ನೋವು ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದು ವೀಕ್ ನೆಸ್ ನ ಲಕ್ಷಣವಾಗಿರಬಹುದು.