ಮಳೆಗಾಲದಲ್ಲಿ ಸಾಮಾನ್ಯ ಶೀತ ಜ್ವರ ಬಂದು ಹೋಗುತ್ತಿರುತ್ತದೆ. ಪ್ರಸ್ತುತ ಕೊರೊನಾ ಭೀತಿ ಇರುವುದರಿಂದ ವೈದ್ಯರನ್ನು ಸಂಪರ್ಕಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಸಾಮಾನ್ಯವಾಗಿ ಕಾಡುವ ವೈರಲ್ ಜ್ವರಕ್ಕೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು.
ಬ್ಯಾಕ್ಟೀರಿಯಾದಿಂದ ಬರುವ ವೈರಲ್ ಜ್ವರದಿಂದ ಗಂಟಲು ಕೆರೆತ, ಊತ, ಜ್ವರ, ಮೂಗು ಸೋರುವಿಕೆಗಳು ಕಂಡು ಬರುತ್ತವೆ. ಇವುಗಳ ನಿವಾರಣೆಗೆ ಈ ಮನೆಮದ್ದು ಬಳಸಿ.
ಶುಂಠಿಯನ್ನು ಜಜ್ಜಿ ರಸ ಹಿಂಡಿ. ಸಮಪ್ರಮಾಣದ ಜೇನು ಬೆರೆಸಿ ಕಲಸಿ ಕುಡಿಯಿರಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿ ಅಕ್ಸಿಡೆಂಟ್ ಗಳಿದ್ದು ನಿಮ್ಮ ಸಮಸ್ಯೆಯನ್ನು ಇದು ನಿವಾರಿಸುತ್ತದೆ.
ತುಳಸಿ ಎಲೆಯಲ್ಲೂ ರೋಗ ನಿರೋಧಕ ಮತ್ತು ಶಿಲೀಂಧ್ರ ವಿರೋಧಿ ಗುಣವಿದ್ದು ಎಲ್ಲಾ ರೀತಿಯ ವೈರಲ್ ಜ್ವರ ಲಕ್ಷಣಗಳನ್ನು ನಿವಾರಿಸುವ ಗುಣ ಹೊಂದಿದೆ. ನೀರಿಗೆ ತುಳಸಿ ದಳ ಹಾಕಿ ಕುದಿಸಿ. ಎರಡು ಲವಂಗ ಹಾಗೂ ದಾಲ್ಚಿನಿ ಪುಡಿ ಸೇರಿಸಿ. ಕುದಿಸಿ ಅರ್ಧದಷ್ಟಾದ ಬಳಿಕ ಬಿಸಿ ಬಿಸಿ ಇರುವಾಗಲೇ ಕುಡಿಯಿರಿ.
ಹಾಲಿಗೆ ತುಳಸಿ ಎಲೆ ಮತ್ತು ಚಿಟಿಕೆ ಅರಿಶಿನ ಹಾಕಿ ಕುಡಿಯುವುದರಿಂದಲೂ ಗಂಟಲಿನ ಕೆರೆತ, ಶೀತದಿಂದ ಮುಕ್ತಿ ಪಡೆಯಬಹುದು.