alex Certify ಮನೋರೋಗಕ್ಕೆ ಮದ್ದಿದೆ….! ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೋರೋಗಕ್ಕೆ ಮದ್ದಿದೆ….! ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ.!

ಬೆಂಗಳೂರು : ಮನೋರೋಗಕ್ಕೆ ಮದ್ದಿದೆ. ಯಾವುದೇ ಮಾನಸಿಕ ಸಮಸ್ಯೆಗಳಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಟೆಲಿ ಮನಸ್ ಶುಲ್ಕ ರಹಿತ ದೂರವಾಣಿ ಸಂಖ್ಯೆ 14416 ಗೆ ಕರೆ ಮಾಡಿ, ಸಹಾಯ ಪಡೆಯಿರಿ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಮಾನಸಿಕ ಕಾಯಿಲೆಗಳ ಕುರಿತು ಮಾಹಿತಿಗಳು

ದೆವ್ವ ಭೂತಗಳ ಚೇಷ್ಟೆಯಿಂದ, ಮಾಟ ಮಂತ್ರಗಳಿಂದ, ಪೂರ್ವಜನ್ಮದ ಪಾಪಗಳಿಂದ, ಮದ್ದು ಹಾಕುವುದರಿಂದ ಮಾನಸಿಕ ಕಾಯಿಲೆಗಳು ಬರುವುದಿಲ್ಲ. ಮಿದುಳಿನಲ್ಲಿ ಆಗುವ ಕೆಲವು ಬದಲಾವಣೆಗಳು, ಮಿದುಳಿನ ಕಾಯಿಲೆಗಳು, ವಾತಾವರಣದಲ್ಲಿ ಕಂಡು ಬರುವ ತೊಂದರೆಗಳು, ಕಷ್ಟನಷ್ಟಗಳು, ಮೇಲಿಂದ ಮೇಲೆ ಮನಸ್ಸಿಗೆ ಆಗುವ ನೋವು ನಿರಾಶೆಗಳು, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಇವುಗಳಿಂದ ಮಾನಸಿಕ ಕಾಯಿಲೆಗಳು ಬರುತ್ತವೆ.
ಮಾನಸಿಕ ಅಸ್ವಸ್ಥರು ತಮ್ಮ ಚಿಕಿತ್ಸೆಗಾಗಿ ಮುಂಚಿತ ನಿರ್ದೇಶನ ನೀಡಬಹುದು ಮತ್ತು ತಮ್ಮ ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡಬಹುದು (ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017).

ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017 ರ ಅನ್ವಯ ಮಾನಸಿಕ ಆರೋಗ್ಯ ಸಂಸ್ಥೆಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರು ಕಡ್ಡಾಯ ನೋಂದಣಿ ಮಾಡುವ ಬಗ್ಗೆಸೆಕ್ಷನ್ 65 (1) ರ ಪ್ರಕಾರ “ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸದೇ ಯಾವುದೇ ವ್ಯಕ್ತಿಯೂ/ಸಂಸ್ಥೆಯೂ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಂತಿಲ್ಲ ಅಥವಾ ನಡೆಸುವಂತಿಲ್ಲ” ರಾಜ್ಯದ ಸರ್ಕಾರಿ ಮತ್ತು ಖಾಸಗಿ ಮಾನಸಿಕ ಆರೋಗ್ಯ ಸಂಸ್ಥೆಗಳು /ದುಶ್ಚಟ ನಿವಾರಣಾ ಕೇಂದ್ರಗಳು/ ಪುನರ್ವಸತಿ ಕೇಂದ್ರಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರು e-manas ಜಾಲತಾಣದ ಲಿಂಕ್ ಮೂಲಕ ನೋಂದಾಯಿಸುವುದು. https://e-manas.karnataka.gov.in/mhms_mhd/#/

ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017 ರ ಪ್ರಕಾರ ಮಾನಸಿಕ ಅಸ್ವಸ್ಥರ ಹಕ್ಕುಗಳು ಕುರಿತು ಮಾಹಿತಿಗಳು
“ಉತ್ತಮ ಗುಣಮಟ್ಟದ ಮಾನಸಿಕ ಚಿಕಿತ್ಸೆ ಪಡೆಯುವ ಹಕ್ಕು, ಸಮುದಾಯದಲ್ಲಿ ಜೀವಿಸುವ ಹಕ್ಕು, ಚಿಕಿತ್ಸಾ ಸಮಯದಲ್ಲಿ ಘನತೆಯುಳ್ಳ ಸಮಾನ ಚಿಕಿತ್ಸೆ ಪಡೆಯುವ ಹಕ್ಕು, ಅಂಬ್ಯುಲೆನ್ಸ್‌ಸೇವೆ ಪಡೆಯುವ ಹಕ್ಕು, ಆರೋಗ್ಯ ವಿಮೆ ಪಡೆಯುವ ಹಕ್ಕು” ಹಾಗೂ ಸೇವೆಗಳಲ್ಲಿನ ಕೊರತೆಗಳ ಬಗ್ಗೆ ದೂರು ನೀಡುವ ಹಕ್ಕು

* ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017 ರಡಿ ಸೆಕ್ಷನ್ 107 ರ ಪ್ರಕಾರ ಮಾನಸಿಕ ಆರೋಗ್ಯ ಸಂಸ್ಥೆಗಳು ನೋಂದಣಿ ಮಾಡದಿದ್ದಲ್ಲಿ ದಂಡಗಳು
ಮೊದಲನೆಯ ಉಲ್ಲಂಘನೆಯ ದಂಡ ರೂ.5000/- ‘
ಎರಡನೆಯ ಉಲ್ಲಂಘನೆಯ ದಂಡ ರೂ.50,000/-

ನೋಂದಾಯಿತವಲ್ಲದ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ಸೇವೆಸಲ್ಲಿಸುತ್ತಿರುವ ಮಾನಸಿಕ ಆರೋಗ್ಯ ವೃತ್ತಿಪರರಿಗೆ ! ರೂ.25,000/- ವರೆಗಿನ ದಂಡ ವಿಧಿಸ ಬಹುದಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...