ಪ್ರತಿಯೊಬ್ಬ ವ್ಯಕ್ತಿಯೂ ಸ್ವಂತ ಮನೆ ಕನಸು ಕಾಣ್ತಾನೆ. ಕೆಲವರ ಕನಸು ಈಡೇರುತ್ತದೆ. ಮತ್ತೆ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಸಹ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಮನೆಬೇಕೆನ್ನುವ ಬಯಕೆ ಹೊಂದಿರುವವರು ಲಾಲ್ ಕಿತಾಬ್‌ನಲ್ಲಿರುವ ಕೆಲವು ಉಪಾಯಗಳನ್ನು ಪಾಲಿಸಬೇಕು.
ಲಾಲ್ ಕಿತಾಬ್ ಪ್ರಕಾರ, ಬೇವಿನ ಮರದಿಂದ ಚಿಕ್ಕ ಮನೆಯನ್ನು ಮಾಡಿ ಬಡವರಿಗೆ ದಾನ ಮಾಡಬೇಕು. ಇಲ್ಲವೆ ಈ ಮನೆಯನ್ನು ಯಾವುದಾದ್ರೂ ದೇವಸ್ಥಾನದಲ್ಲಿ ಇಡಬೇಕು.
6 ಚಮಚದಷ್ಟು ಕುಂಕುಮ, 6 ಲವಂಗ, ಒಂಬತ್ತು ಬಿಂದಿ ಹಾಗೂ 6 ಕವಡೆಗಳು ಮತ್ತು ಒಂಬತ್ತು ಮುಷ್ಠಿ ಮಣ್ಣನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ನದಿಗೆ ಹಾಕಬೇಕು. ಹೀಗೆ ಮಾಡುವುದರಿಂದ ಮನೆಯ ಆರ್ಥಿಕ ಸಮಸ್ಯೆ ಪರಿಹಾರವಾಗುತ್ತದೆ.
ಒಂದು ಮಣ್ಣಿನ ಮಡಿಕೆಯಲ್ಲಿ ಹಾಲು, ಮೊಸರು, ಕರ್ಪೂರ, ತುಪ್ಪ ಮತ್ತು ಸಕ್ಕರೆ ಹಾಕಿ ದುರ್ಗೆಯ ನವರ್ಣ ಮಂತ್ರವನ್ನು 108 ಬಾರಿ ಜಪಿಸಿ ನಂತರ ಮಣ್ಣಿನೊಳಗೆ ಹಾಕಿದ್ರೆ ಅಥವಾ ನದಿಗೆ ಹಾಕಿದರೆ, ಭೂಮಿ ಅಥವಾ ಹೊಸ ಮನೆ ಖರೀದಿಸಲು ಇರುವ ತೊಂದರೆ ದೂರವಾಗುತ್ತದೆ.