ಹಲವಾರು ರೋಗಗಳಿಗೆ ರಾಮಬಾಣವಾದ ಡ್ರ್ಯಾಗನ್ ಹಣ್ಣಿನ ಉಪಯೋಗಗಳು ಹಲವು. ಇದರಲ್ಲಿ ಹೆಚ್ಚಿನ ನಾರಿನಂಶ, ಲಿಯೋಕೆಪಾಸ್, ಪ್ರೊಟೀನ್, ವಿಟಮಿನ್ ಸಿ, ಕಾರ್ಟಿನ್, ಕ್ಯಾಲ್ಸಿಯಂ, ಪಾಸ್ಪರಾಸ್, ಕಬ್ಬಿಣಾಂಶ, ಪ್ರೊಟೊ ನ್ಯೂಟ್ರಿಯನ್ಸ್ ಒಮೆಗಾ 3, ಒಮೆಗಾ 6, ಪೆತ್ ಆಸಿಡ್ಸ್ ಗಳಿವೆ. ಅಲ್ಲದೆ ಕಡಿಮೆ ಕ್ಯಾಲೊರಿ ಹೊಂದಿದೆ.
ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುವುದರಿಂದ ದೇಹ ತೂಕವನ್ನು ಇಳಿಸಲು ಇದು ಸಹಕರಿಸುತ್ತದೆ. ಡ್ರ್ಯಾಗನ್ ಫ್ರೂಟ್ ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಒಮೆಗಾ 3 ಆಂಟಿ ಆಸಿಡ್ ಗಳನ್ನು ಹೊಂದಿರುವುದರಿಂದ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಡ್ರ್ಯಾಗನ್ ಫ್ರೂಟ್ ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಕಾರಣ ಇದು ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
ಈ ಡ್ರ್ಯಾಗನ್ ಫ್ರೂಟ್ ನಲ್ಲಿರುವ ವಿಟಮಿನ್ ಸಿ ಅಂಶವು ತ್ವಚೆಯ ಹೊಳಪಿಗೆ ಕಾರಣವಾಗುತ್ತದೆ. ಅತ್ಯಧಿಕ ಖನಿಜಾಂಶವನ್ನು ಹೊಂದಿರುವ ಕಾರಣ, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಡ್ರ್ಯಾಗನ್ ಫ್ರೂಟ್ ನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳು ಹೆಚ್ಚಾಗಿದ್ದು, ಇದು ಮೆದುಳನ್ನು ಚುರುಕಾಗಿ ಇರುವಂತೆ ಮಾಡುತ್ತದೆ.