ಬಾಳೆಹಣ್ಣು ಅತ್ಯಂತ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದು. ಪೊಟಾಷಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ ಹೆಚ್ಚಿದೆ. ಬಾಳೆಹಣ್ಣುಗಳಿಂದ ಇನ್ನೂ ಏನೆಲ್ಲಾ ಉಪಯೋಗವಿದೆ ತಿಳಿದುಕೊಳ್ಳಿ.
ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು
ಬಾಳೆಹಣ್ಣಿನಲ್ಲಿರುವ ಅಂಶ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿ. ಮೆದುಳಿನಲ್ಲಿರುವ ಸೆರೊಟೋನಿನ್ ಅಂಶ ಕಡಿಮೆಯಾದಲ್ಲಿ ಒತ್ತಡಕ್ಕೆ ಒಳಗಾಗುತ್ತೇವೆ. ಬಾಳೆಹಣ್ಣು ಮೆದುಳಿಗೆ ಅಗತ್ಯವಾದ ಸೆರೊಟೋನಿನ್ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
ತೂಕ ಇಳಿಸಲು ಸಹಕಾರಿ
ತೂಕ ಇಳಿಸಲು ಇಚ್ಛೆ ಪಡುವವರು ಬಾಳೆಹಣ್ಣು ತಿನ್ನಬಹುದು. ಸ್ನಾಕ್ ಆಗಿ ಬಾಳೆಹಣ್ಣು ಅತ್ಯಂತ ಆರೋಗ್ಯಕರ ಆಹಾರವಾಗಿದೆ. ದೇಹಕ್ಕೆ ಅಗತ್ಯವಾದ ಶೇ.12 ರಷ್ಟು ಫೈಬರ್ ಅಂಶದ ಅವಶ್ಯಕತೆಯನ್ನು ಪೂರೈಸುತ್ತದೆ.
ಪೋಷಕಾಂಶಗಳು ಹೆಚ್ಚು
ಮೆಗ್ನಿಷೀಯಂ ಹಾಗೂ ಪೊಟ್ಯಾಷಿಯಂ ಹೆಚ್ಚಿರುವ ಹಿನ್ನೆಲೆಯಲ್ಲಿ ಮೆದುಳನ್ನು ಹೆಚ್ಚು ಕ್ರಿಯಾಶೀಲವಾಗಿರಿಸಲು ಬಾಳೆಹಣ್ಣು ಸಹಕಾರಿ. ಅಲ್ಲದೆ ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಂ ಅಂಶವನ್ನು ಬಾಳೆಹಣ್ಣು ಒದಗಿಸುತ್ತದೆ. ಇದರಿಂದ ಮೂಳೆಗಳು ಸದೃಢವಾಗುತ್ತದೆ.
ದಿನ ಒಂದು ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಜೀರ್ಣಕ್ರಿಯೆ ಸೇರಿ ದೇಹದ ಎಲ್ಲಾ ಭಾಗಗಳಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.