ತೆಂಗಿನ ಕಾಯಿ ಒಡೆಯುವಾಗ ಸಿಗುವ ನೀರನ್ನು ವ್ಯರ್ಥವೆಂದು ಸಿಂಕ್ ಗೆ ಚೆಲ್ಲುತ್ತೀರಾ, ಬೇಡ. ಇದರಲ್ಲಿರುವ ಪೌಷ್ಟಿಕಾಂಶಗಳು ಎಳನೀರಿಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ.
ತೆಂಗಿನಕಾಯಿ ನೀರು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಸಿಲಿನ ಬೇಗೆಯಿಂದ ನಿರ್ಜಲೀಕರಣಗೊಳ್ಳುವ ದೇಹಕ್ಕೆ ಬೇಕಿರುವ ನೀರಿನಾಂಶವನ್ನು ಒದಗಿಸುತ್ತದೆ. ದೇಹಕ್ಕೆ ತಂಪನ್ನು ಒದಗಿಸುವ ಸಕ್ಕರೆ ಮತ್ತು ಇಲೆಕ್ಟ್ರೋಲೈಟ್ಸ್ ಸಮನಾಗಿ ಬೆರೆತಿರುವ ಪೇಯದ ಅವಶ್ಯಕತೆ ನಮ್ಮ ದೇಹಕ್ಕಿದೆ.
ತೆಂಗಿನ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಂಜೀಮ್ಗಳಿದ್ದು ಜೀರ್ಣಕ್ರಿಯಯ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ಇದನ್ನು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಪದೇ ಪದೇ ಹಸಿವಾಗದು. ಹಾಗಾಗಿ ಇದು ದೇಹ ತೂಕ ಇಳಿಕೆಗೂ ಸಹಕಾರಿ. ವಿಟಮಿನ್ ಗಳು ಹೇರಳವಾಗಿರುವ ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.