ಜೇನುತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಾಂಪ್ರದಾಯಿಕ ತ್ವರಿತ ಶಕ್ತಿ ವರ್ಧನೆ ಆಹಾರಗಳಲ್ಲಿ ಜೇನುತುಪ್ಪ ಹೆಚ್ಚು ಪರಿಣಾಮಕಾರಿ. ಸಕ್ಕರೆಗೆ ಪರ್ಯಾಯವಾಗಿ ನೈಸರ್ಗಿಕವಾಗಿ ಸಿಗುವ ಜೇನುತುಪ್ಪ ಬಳಕೆ ಹೆಚ್ಚು ಉತ್ತಮ. ಒಂದೇ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು. ಜೇನುತುಪ್ಪ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೂಡ ಸಹಾಯಕಾರಿಯಾಗಿದೆ.
* ಒಂದು ಗ್ಲಾಸ್ ನೀರಿಗೆ 1-3 ಚಮಚ ಜೇನುತುಪ್ಪ ಬೆರೆಸಿ, ದಿನಕ್ಕೆ ಎರಡು ಬಾರಿ ಸೇವಿಸಿದರೆ ನರಮಂಡಲ ದೌರ್ಬಲ್ಯ, ಕೈಕಾಲುಗಳಲ್ಲಿನ ನೋವು ನಿವಾರಣೆಯಾಗುತ್ತೆ.
* ಮುಂಜಾನೆ ಒಂದು ಗ್ಲಾಸ್ ಬೆಚ್ಚನೆ ನೀರಿಗೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ದೇಹದ ತೂಕ ನಿರ್ವಹಣೆಗೆ ಸಹಾಯವಾಗುತ್ತದೆ.
* ಒಂದು ಗ್ಲಾಸ್ ಬೆಚ್ಚನೆ ನೀರಿಗೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ.
* ತರಚಿದ ಗಾಯದ ಮೇಲೆ ಜೇನುತುಪ್ಪ ಸವರುವುದರಿಂದ ಗಾಯ ಬೇಗ ವಾಸಿಯಾಗುತ್ತದೆ ಮಾತ್ರವಲ್ಲ ಗಾಯದ ಕಲೆಗಳನ್ನು ಕೂಡ ಮಾಯವಾಗಿಸುತ್ತದೆ.