ಭಾರತೀಯರ ಮನೆಗಳಲ್ಲಿ ಕಂಚನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದರಲ್ಲಿ ತಾಮ್ರ ಮತ್ತು ತವರವೂ ಇದೆ. ಈ ಕಂಚಿನ ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು ತಿಳಿಯೋಣ.
*ಕಂಚಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಬಳಕೆ ಮೆದುಳನ್ನು ತೀಕ್ಷ್ಣಗೊಳಿಸುತ್ತದೆ. ಇದನ್ನು ಪ್ರತಿದಿನ ಕುಡಿಯಲು ಮತ್ತು ತಿನ್ನಲು ಬಳಸಿದರೆ ರೋಗ ನಿರೋಧಕ ಶಕ್ತಿ ಬಲವಾಗುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ.
*ಕಂಚಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಅದು ಆಹಾರದಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾ, ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ.
*ಆಮ್ಲೀಯ ಪದಾರ್ಥಗಳನ್ನು ಕಂಚಿನ ಪಾತ್ರೆಯಲ್ಲಿ ಸಂಗ್ರಹಿಸಿಡಬಹುದು. ಯಾಕೆಂದರೆ ಆಮ್ಲೀಯ ಆಹಾರಗಳು ಕಂಚಿನೊಂದಿಗೆ ಪ್ರತಿಕ್ರಿಯಿಸುವುದಿಲ್ಲ.