ಕಿತ್ತಳೆ ಚಳಿಗಾಲದ ಸೀಸನ್‌ನ ಅತ್ಯುತ್ತಮ ಹಣ್ಣು. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಹೇಳಿಮಾಡಿಸಿದಂತಿರುತ್ತದೆ. ಕಿತ್ತಳೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಬೇಗನೆ ಶೀತ ಮತ್ತು ಕೆಮ್ಮು ನಮ್ಮನ್ನು ಆವರಿಸಿಕೊಳ್ಳುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಬೆಳಗಿನ ಉಪಾಹಾರದಲ್ಲಿ ಕಿತ್ತಳೆ ರಸವನ್ನು ಕುಡಿಯಲು ಇಷ್ಟಪಡುತ್ತಾರೆ.
ಕಿತ್ತಳೆ ಹಣ್ಣಿನ ಜ್ಯೂಸ್ ನಮ್ಮಲ್ಲಿ ತಾಜಾತನ ತುಂಬುತ್ತದೆ. ತಂಪಾದ ವಾತಾವರಣದಲ್ಲಿ ಕಿತ್ತಳೆ ಹಣ್ಣುಗಳನ್ನು ತಿನ್ನಲು ಅಥವಾ ಅದರ ರಸವನ್ನು ಕುಡಿಯಲು ಸರಿಯಾದ ಸಮಯ ಯಾವಾಗ ಎಂಬುದನ್ನು ತಿಳಿದುಕೊಳ್ಳಬೇಕು. ಕಿತ್ತಳೆ ರಸವನ್ನು ಅಕಾಲಿಕವಾಗಿ ಕುಡಿದರೆ ಗ್ಯಾಸ್ ಮತ್ತು ಮಲಬದ್ಧತೆಯ ಸಮಸ್ಯೆ ಬರಬಹುದು. ಸರಿಯಾದ ಸಮಯದಲ್ಲಿ ಕಿತ್ತಳೆ ಹಣ್ಣನ್ನು ತಿಂದರೆ ಮಾತ್ರ ದೇಹಕ್ಕೆ ಗರಿಷ್ಠ ಪ್ರಯೋಜನ ಸಿಗುತ್ತದೆ.
ಚಳಿಗಾಲದಲ್ಲಿ ಕಿತ್ತಳೆ ತಿನ್ನಲು ಸರಿಯಾದ ಸಮಯ
ಆರೋಗ್ಯ ತಜ್ಞರ ಪ್ರಕಾರ ಕಿತ್ತಳೆ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿಯಲ್ಲಿ ತಿನ್ನಬಾರದು. ಕಿತ್ತಳೆ ರಸವನ್ನು ಮಧ್ಯಾಹ್ನ ಕುಡಿಯಬೇಕು. ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ಆಸಿಡ್ ರಿಫ್ಲಕ್ಸ್ ಉಂಟಾಗುತ್ತದೆ. ಇದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಆಗಬಹುದು.
ಕಿತ್ತಳೆ ಹಣ್ಣನ್ನು ನೇರವಾಗಿ ತಿನ್ನುವುದು ಅಥವಾ ಅದರ ರಸವನ್ನು ಕುಡಿಯುವುದರಿಂದ ಚರ್ಮವು ಹೆಚ್ಚು ಆರೋಗ್ಯಕರವಾಗಿರುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸಬಲ್ಲದು. ಹೊಟ್ಟೆಯ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.
ಚಳಿಗಾಲದಲ್ಲಿ ನಿಯಮಿತವಾಗಿ ಕಿತ್ತಳೆ ತಿನ್ನುತ್ತಿದ್ದರೆ ಒಂದೇ ವಾರದಲ್ಲಿ ಅದರ ಪರಿಣಾಮವನ್ನು ನೋಡಬಹುದು. ಇದರಲ್ಲಿ ನಾರಿನಂಶ ಅತಿ ಹೆಚ್ಚಾಗಿರುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಕಿತ್ತಳೆ ಕಣ್ಣುಗಳಿಗೆ ತುಂಬಾ ಒಳ್ಳೆಯದು. ದೃಷ್ಟಿ ದುರ್ಬಲವಾಗಿರುವವರು ಕಿತ್ತಳೆ ಅಥವಾ ನಿಂಬೆ ತಿನ್ನಬೇಕು.
ಕಿತ್ತಳೆ ಹಣ್ಣಿನ ಅತಿಯಾದ ಸೇವನೆಯು ಅದರ ಫೈಬರ್ ಅಂಶದಿಂದಾಗಿ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸಿಟ್ರಸ್ ಅಲರ್ಜಿಗಳು ಅಥವಾ ಮೂತ್ರಪಿಂಡದ ಸಮಸ್ಯೆಳಿರುವವರು ಕಿತ್ತಳೆಯನ್ನು ಮಿತವಾಗಿ ತಿನ್ನಬೇಕು.
ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆ ಇರುವವರು ಕಿತ್ತಳೆ ತಿನ್ನಬಾರದು. ಏಕೆಂದರೆ ಕಿತ್ತಳೆಯಲ್ಲಿ ಪೊಟ್ಯಾಶಿಯಂ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಸಿಟ್ರಸ್ ಅಲರ್ಜಿ ಇರುವವರು ಪ್ರತಿದಿನ ಕಿತ್ತಳೆ ತಿನ್ನಬಾರದು.