ತರಕಾರಿಗಳ ಪೈಕಿ ತೊಂಡೆಕಾಯಿಯನ್ನು ಇಷ್ಟಪಡದವರು ಯಾರೂ ಇಲ್ಲವೇನೋ. ಗಾತ್ರದಲ್ಲಿ ಪುಟಾಣಿಯಾದರೂ ರುಚಿ ಬೆಟ್ಟದಷ್ಟು.
ಇದನ್ನು ಪಲ್ಯ, ಸಾಂಬಾರು ರೂಪದಲ್ಲಿ ಸೇವಿಸಲಾಗುತ್ತದೆ. ಇದರ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ?
ತೊಂಡೆಕಾಯಲ್ಲಿ ಫೈಬರ್ ಅಂಶ ಹೇರಳವಾಗಿದ್ದು ವಿಟಮಿನ್ ಎ, ಕ್ಯಾಲ್ಸಿಯಂ, ಕ್ಯಾಲೊರಿಗಳು ಸಾಕಷ್ಟಿವೆ. ಮೂತ್ರಪಿಂಡದ ಸಮಸ್ಯೆ ಎದುರಿಸುವವರು ನಿತ್ಯ ಇದನ್ನು ತಿನ್ನುವುದರಿಂದ ನಿಮ್ಮೆಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ತೊಂಡೆಕಾಯಿ ಎಲೆಗಳನ್ನು ಬಾಯಿ ಹುಣ್ಣಿಗೆ ಮದ್ದಾಗಿ ಬಳಸಲಾಗುತ್ತದೆ. ಈ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಜೀರಿಗೆಯೊಂದಿಗೆ ಜಗಿದು ತಿಂದರೆ ಬಾಯಿಹುಣ್ಣು ಸಮಸ್ಯೆ ಒಂದೇ ದಿನದಲ್ಲಿ ದೂರವಾಗುತ್ತದೆ. ಅಥವಾ ಇದನ್ನು ತಂಬುಳಿ ರೂಪದಲ್ಲೂ ಸೇವಿಸಬಹುದು.
ತೊಂಡೆಕಾಯಿಯ ಎಲೆಯನ್ನು ಜಜ್ಜಿ ಕಜ್ಜಿಗಳಾಗಿದ್ದಲ್ಲಿಗೆ ಹಚ್ಚಿದರೆ ನೋವು ಹಾಗೂ ಗಾಯ ಗುಣವಾಗುತ್ತದೆ. ತೊಂಡೆಕಾಯಿ ಎಲೆಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು, ಇದರ ರಸವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ದೇಹದ ಉಷ್ಣ ಕಡಿಮೆಯಾಗುತ್ತದೆ.