ಒಣ ಹಣ್ಣು ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪೋಷಕಾಂಶಗಳ ಆಗರವಾಗಿರುವ ಬಾದಾಮಿ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರತಿ ದಿನ ನೆನೆಸಿದ ನಾಲ್ಕು ಬಾದಾಮಿಯನ್ನು ತಿಂದರೆ ಅಂದ ಹೆಚ್ಚುವುದರ ಜೊತೆಗೆ ಆರೋಗ್ಯ ಭಾಗ್ಯವೂ ಸಿಗುತ್ತದೆ. ಬಾದಾಮಿಯಲ್ಲಿ ಕೊಬ್ಬು ಕರಗಿಸುವಂತಹ ಗುಣ ಇದೆ ಇದರಲ್ಲಿ ವಿಟಮಿನ್ಸ್ ಮಿನರಲ್ಸ್ ಗಳು ಸಮೃದ್ಧಿಯಾಗಿವೆ.
ಬಾದಾಮಿಯಿಂದ ಮಿಲ್ಕ್ ಶೇಕ್ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಪ್ರತಿದಿನ 8 ಬಾದಾಮಿಯಂತೆ ವಾರಕ್ಕೆ 5 ಬಾರಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೃದಯದ ಸಮಸ್ಯೆಗಳು ನಿಯಂತ್ರಣದಲ್ಲಿರುತ್ತವೆ.
ಇದರಲ್ಲಿ ವಿಟಮಿನ್ ‘ಇ’ ಇದೆ, ಅದರೊಂದಿಗೆ ಪೊಟ್ಯಾಷಿಯಂ, ಸೋಡಿಯಮ್ ಅಂಶ ಕಡಿಮೆ ಇದೆ ಆದ್ದರಿಂದ ಬಾದಾಮಿ ಸೇವಿಸುವುದರಿಂದ ರಕ್ತದೊತ್ತಡ ಸಮಸ್ಯೆ ಇರುವುದಿಲ್ಲ.
ಬಾದಾಮಿಯಲ್ಲಿರುವ ಕ್ಯಾಲ್ಸಿಯಂ ಎಲುಬುಗಳಿಗೆ ಶಕ್ತಿಯನ್ನು ನೀಡುತ್ತದೆ. ಇದು ರಕ್ತದಲ್ಲಿ ಇನ್ಸುಲಿನ್ ಅಂಶವನ್ನು ವೃದ್ಧಿಸುತ್ತದೆ.