ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಅದರ ಸಿಪ್ಪೆಯಿಂದ ಕೂಡ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಇನ್ನು ಹಲವು ಕೆಲಸಗಳಗೆ ಬಳಸಬಹುದು ಅದು ಯಾವುದೆಂಬುದನ್ನು ನೋಡೋಣ.
*ಬಾಳೆಹಣ್ಣಿನ ಸಿಪ್ಪೆಯಿಂದ ನೈಸರ್ಗಿಕ ಗೊಬ್ಬರವನ್ನು ತಯಾರಿಸಬಹುದು. ನೀರಿನಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಹಾಕಿ ಕುದಿಸಿ 4-5 ದಿನಗಳವೆರೆಗೆ ಬಿಡಿ. ಇದರಲ್ಲಿ ರಂಜಕ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿರುವುದರಿಂದ ಇದನ್ನು ಸಸ್ಯಗಳಿಗೆ ಹಾಕಿದರೆ ಬಹಳ ವೇಗವಾಗಿ ಬೆಳೆಯುತ್ತವೆ.
*ಬೂಟುಗಳು ಹೊಳಪು ಕಳೆದುಕೊಂಡಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿರಿ, ಇದರಿಂದ ಬೂಟು ಚೆನ್ನಾಗಿ ಹೊಳೆಯುತ್ತದೆ.
*ಹಲ್ಲುಗಳಲ್ಲೂ ಹಳದಿ ಪಾಚಿ ಹಿಡಿದಿದ್ದರೆ, ಅದನ್ನು ಕ್ಲೀನ್ ಮಾಡಲು ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿ. ಆಗ ಹಲ್ಲು ಚೆನ್ನಾಗಿ ಹೊಳೆಯುತ್ತದೆ.