ಚಳಿಗಾಲದಲ್ಲಿ ಸೂರ್ಯನ ಕಿರಣಗಳಿಗೆ ನಿಮ್ಮನ್ನು ಒಗ್ಗಿಕೊಳ್ಳುವುದರಿಂದ ತ್ವಚೆಯ ಹಲವು ಲಾಭಗಳನ್ನು ಪಡೆಯಬಹುದು. ತ್ವಚೆಯ ಅಲರ್ಜಿ ನಿವಾರಿಸಲು ಇದು ಅತ್ಯುತ್ತಮ ವಿಧಾನ. ವಿಟಮಿನ್ ಡಿ ಹೇರಳವಾಗಿ ನಮ್ಮ ದೇಹಕ್ಕೆ ಸಿಗುವಂತೆ ಮಾಡಲು ಸೂರ್ಯ ಸ್ನಾನವೇ ಅತ್ಯುತ್ತಮ ಮಾರ್ಗ.
ಚಳಿಗಾಲದಲ್ಲಿ ಯಾವ ಹೀಟರ್ ಆಗಲಿ, ಯಾವ ಮಾತ್ರೆಯಾಗಲಿ ನೀಡದಷ್ಟು ಪ್ರಮಾಣದ ಲಾಭಗಳನ್ನು ಸೂರ್ಯನ ಬೆಳಗಿನ ಹಾಗೂ ಸಂಜೆಯ ಕಿರಣಗಳು ನೀಡುತ್ತವೆ. ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಆ ಬಿಸಿಲಿಗೆ ನಿಮ್ಮನ್ನು ನೀವು ಒಡ್ಡಿಕೊಂಡರೆ ಸಾಕು.
ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ಕ್ಯಾಲ್ಸಿಯಂ ಸಮಸ್ಯೆ ದೂರವಾಗುತ್ತದೆ. ಸ್ನಾಯುಗಳು ಗಟ್ಟಿಯಾಗಿ, ಕೀಲು ನೋವಿನಂಥ ಸಮಸ್ಯೆಗಳು ದೂರವಾಗುತ್ತವೆ. ಹಾಗಾಗಿ ಈ ಸಮಸ್ಯೆ ಇರುವವರು ನಿತ್ಯ ಬಿಸಿಲಿಗೆ ನಿಲ್ಲಿ.
ಮೆದುಳಿನ ಆರೋಗ್ಯ ಕಾಪಾಡಲೂ ಇದು ಸಹಕಾರಿ. ನಿತ್ಯ ಬಿಸಿಲಿನ ಸ್ನಾನ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ಕಾಡದು. ಇದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ.