alex Certify ಒಂಟಿಯಾಗಿರುವವರು ಸಂತೋಷವಾಗಿರಲು ಕಾರಣಗಳು ಅನೇಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂಟಿಯಾಗಿರುವವರು ಸಂತೋಷವಾಗಿರಲು ಕಾರಣಗಳು ಅನೇಕ

ಸಂಗಾತಿ ಹೊಂದಿರುವವರ ಜೀವನದಲ್ಲಿ ಸದಾ ಸಂತೋಷ ತುಂಬಿರುತ್ತದೆ. ಹಾಗಂತಾ ಸಂಗಾತಿ ಇಲ್ಲದವರು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಒಂಟಿಯಾಗಿರುವವರು ಕೂಡ ಸಂಗಾತಿ ಇದ್ದವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರಂತೆ.

ಒಂಟಿಯಾಗಿರುವವರು ಸಂತೋಷವಾಗಿರಲು ಅನೇಕ ಕಾರಣಗಳಿವೆ.

ಯಶಸ್ಸಿನ ಮೆಟ್ಟಿಲು : ಒಂಟಿಯಾಗಿರುವವರು ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಏರಬಹುದು. ಕೆಲಸಕ್ಕೆ ಹೆಚ್ಚಿನ ಗಮನ ನೀಡಬಹುದು.

ಸಂತೋಷ ಮತ್ತು ಆರೋಗ್ಯ : ಸಂಶೋಧನೆಯೊಂದು ಒಂಟಿಯಾಗಿರುವವರು ಆರೋಗ್ಯವಂತರಾಗಿರ್ತಾರೆಂಬ ವಿಷಯವನ್ನು ಬಹಿರಂಗಪಡಿಸಿದೆ. ಒಂಟಿಯಾಗಿರುವವರು ಉತ್ತಮ ಲೈಫ್ ಸ್ಟೈಲ್ ಹೊಂದಿರುತ್ತಾರಂತೆ.

ಸ್ನೇಹಿತರು : ಒಂಟಿಯಾಗಿರುವವರ ನೆಟ್ ವರ್ಕ್ ದೊಡ್ಡದಿರುತ್ತದೆ. ಫ್ರೆಂಡ್ಸ್ ಜೊತೆ ಕಳೆಯಲು ಅವರಿಗೆ ಸಾಕಷ್ಟು ಸಮಯ ಹಾಗೂ ಅವಕಾಶವಿರುವುದರಿಂದ ಅವರ ಸ್ನೇಹಿತರ ಸಂಖ್ಯೆ ದೊಡ್ಡದಿರುತ್ತದೆ.

ಮನಸ್ಸಿಗೆ ತೋಚಿದ್ದನ್ನು ಮಾಡಬಹುದು : ಯಾವುದೇ ಅಡೆ ತಡೆ ಇರುವುದಿಲ್ಲ. ಹಾಗಾಗಿ ಮನಸ್ಸಿಗೆ ಬಂದಲ್ಲಿ ಹೋಗಬಹುದು. ಮನಸ್ಸಿಗೆ ಬಂದಿದ್ದನ್ನು ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...