alex Certify ಐವಿಎಫ್ ಮಾತ್ರವಲ್ಲ ಬಂಜೆತನಕ್ಕಿದೆ ಇನ್ನೂ ಅನೇಕ ರೀತಿಯ ಪರಿಹಾರ; ಇಲ್ಲಿದೆ ಚಿಕಿತ್ಸೆಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐವಿಎಫ್ ಮಾತ್ರವಲ್ಲ ಬಂಜೆತನಕ್ಕಿದೆ ಇನ್ನೂ ಅನೇಕ ರೀತಿಯ ಪರಿಹಾರ; ಇಲ್ಲಿದೆ ಚಿಕಿತ್ಸೆಗಳ ವಿವರ

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿ, ಅಸಮತೋಲಿತ ಹಾರ್ಮೋನುಗಳು ಮತ್ತು ಇತರ ಸಮಸ್ಯೆಗಳಿಂದ ಬಂಜೆತನ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಮಾತ್ರವಲ್ಲದೆ ಪುರುಷರಲ್ಲಿಯೂ ಬಂಜೆತನದ ಕಂಡುಬರುತ್ತದೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮಗುವನ್ನು ಹೊಂದಲು ಐವಿಎಫ್ ಅನ್ನು ಆಶ್ರಯಿಸುತ್ತಾರೆ. ಇನ್ ವಿಟ್ರೋ ಫರ್ಟಿಲೈಸೇಶನ್ ಎಂದು ಇದನ್ನು ಕರೆಯಲಾಗುತ್ತದೆ. ಮಹಿಳೆಯ ಎಗ್ ಅನ್ನು ಪುರುಷರ ವೀರ್ಯದೊಂದಿಗೆ ಪ್ರಯೋಗಾಲಯದಲ್ಲಿ ಪಕ್ವಗೊಳಿಸಿ ನಂತರ ಅವುಗಳನ್ನು ಮಹಿಳೆಯ ಗರ್ಭದಲ್ಲಿ ಅಳವಡಿಸುವ ಕಷ್ಟಕರ ಪ್ರಕ್ರಿಯೆ ಇದು.

IVF ಕ್ಲಿಷ್ಟಕರವಾದ ಪ್ರಕ್ರಿಯೆ ಮಾತ್ರವಲ್ಲ ಅತ್ಯಂತ ದುಬಾರಿ ಕೂಡ. ಬಡ ಮತ್ತು ಮಧ್ಯಮವರ್ಗದವರು ಈ ಚಿಕಿತ್ಸೆ ಪಡೆಯುವುದು ಬಹಳ ಕಷ್ಟಕರ. ಹಾಗಾಗಿ ಬಂಜೆತನಕ್ಕೆ ಪರಿಹಾರ ನೀಡಬಲ್ಲ ಇತರ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಬಂಜೆತನಕ್ಕೆ IUI ಚಿಕಿತ್ಸೆಯಲ್ಲಿ ಕೂಡ ಪರಿಹಾರವಿದೆ.

IUI ಎಂದರೇನು?

IVF ಬದಲು ಈ ದಿನಗಳಲ್ಲಿ IUI ತಂತ್ರವನ್ನು ಬಂಜೆತನಕ್ಕೆ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ. ಇದು ಸಾಮಾನ್ಯವಾಗಿ ಪುರುಷರ ಬಂಜೆತನಕ್ಕೆ ಪರಿಹಾರ ನೀಡುತ್ತದೆ. ಇದರಲ್ಲಿ ಮಹಿಳೆಯ ಅಂಡೋತ್ಪತ್ತಿ ಸಮಯದಲ್ಲಿ ಪುರುಷನ ವೀರ್ಯವನ್ನು ಮಹಿಳೆಯ ಗರ್ಭಾಶಯದೊಳಗೆ ಕೊಳವೆಯ ಮೂಲಕ ವರ್ಗಾಯಿಸಲಾಗುತ್ತದೆ.

ಇದಕ್ಕಾಗಿ ಪುರುಷರು ಪ್ರಯೋಗಾಲಯಕ್ಕೆ ಬಂದು ತಮ್ಮ ಮಾದರಿಯನ್ನು ನೀಡಬೇಕು. ಪರೀಕ್ಷೆಯ ನಂತರ ಅದನ್ನು ಮಹಿಳೆಯರ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಗೆ 10,000 – 20,000 ರೂಪಾಯಿಯಷ್ಟು ವೆಚ್ಚವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಒಂಟಿ ತಾಯಂದಿರು IUI ತಂತ್ರದ ಮೂಲಕ ಗರ್ಭಿಣಿಯಾಗುತ್ತಿದ್ದಾರೆ.  ಇದರಲ್ಲಿ ಪುರುಷನ ಗುರುತನ್ನು ಮರೆಮಾಡಲಾಗುತ್ತದೆ.

IVF ಹೊರತುಪಡಿಸಿ ಬಂಜೆತನಕ್ಕೆ ಇತರ ಚಿಕಿತ್ಸೆಗಳು

IVF ಮತ್ತು IUI ಜೊತೆಗೆ, ಬಂಜೆತನಕ್ಕೆ ಆಪರೇಟಿವ್ ಹಿಸ್ಟರೊಸ್ಕೋಪಿ ಮತ್ತು ಲ್ಯಾಪರೊಸ್ಕೋಪಿ ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಮಹಿಳೆಗೆ ಎಂಡೊಮೆಟ್ರಿಯೊಸಿಸ್ ಅಥವಾ ಫೈಬ್ರಾಯ್ಡ್‌ಗಳಂತಹ ಸಮಸ್ಯೆಗಳಿದ್ದರೆ ಈ ಶಸ್ತ್ರಚಿಕಿತ್ಸೆಯನ್ನು ಬಳಸಲಾಗುತ್ತದೆ. ಇದರ ವೆಚ್ಚ 30 ಸಾವಿರದಿಂದ 1 ಲಕ್ಷ ರೂಪಾಯಿ ಆಗಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...