ಊಟದ ಜೊತೆಗೆ ಸಲಾಡ್ ಅನ್ನು ಸಹ ಸೇವಿಸಬೇಕು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಸೌತೆಕಾಯಿ, ಈರುಳ್ಳಿ, ಮೂಲಂಗಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಬ್ಲಾಕ್ ಸಾಲ್ಟ್ ಬಳಸಿ ರುಚಿಕರ ಸಲಾಡ್ ತಯಾರಿಸಲಾಗುತ್ತದೆ. ಇವುಗಳ ಸಂಯೋಜನೆ ಸೂಪರ್‌ಫುಡ್‌ನ ರೂಪವನ್ನು ಪಡೆಯುತ್ತದೆ. ಪ್ರತಿನಿತ್ಯ ಸಲಾಡ್ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
ಪೌಷ್ಟಿಕಾಂಶ – ವಿಟಮಿನ್ ಎ, ವಿಟಮಿನ್ ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳು ಸಲಾಡ್‌ನಲ್ಲಿ ಕಂಡುಬರುತ್ತವೆ. ಈ ಅಂಶಗಳು ದೈಹಿಕ ಬೆಳವಣಿಗೆ, ರಕ್ತದ ಶುದ್ಧತೆ, ದೇಹದ ಶಕ್ತಿ ಮತ್ತು ಚರ್ಮದ ರಕ್ಷಣೆಗೆ ಸಹಾಯ ಮಾಡುತ್ತವೆ.
ತೂಕ ನಿಯಂತ್ರಣ – ಸಲಾಡ್‌ನಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ. ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಇದು ಹೊಂದಿರುತ್ತದೆ. ಇದು ತೂಕವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ ಸಲಾಡ್ ಹಸಿವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕ ನಿರ್ವಹಣೆಯನ್ನು ಉತ್ತೇಜಿಸುತ್ತದೆ.
ಉತ್ತಮ ಜೀರ್ಣಕ್ರಿಯೆ – ಸಲಾಡ್ ಸಾಕಷ್ಟು ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ, ಗ್ಯಾಸ್ಟ್ರಿಕ್‌ನಿಂದಲೂ ಪರಿಹಾರ ನೀಡುತ್ತದೆ. ಸಲಾಡ್ ಸೇವನೆಯಿಂದ ಹೊಟ್ಟೆಯ ಸೋಂಕಿನ ಸಾಧ್ಯತೆ ಕಡಿಮೆಯಾಗುತ್ತದೆ.
ರಕ್ತದೊತ್ತಡ ನಿಯಂತ್ರಣ – ಸಲಾಡ್‌ನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದ್ರೋಗಿಗಳು ಹೆಚ್ಚಾಗಿರುವ ಭಾರತದಲ್ಲಿ ಸಲಾಡ್ ತಿನ್ನುವುದು ಪ್ರಯೋಜನಕಾರಿ.
ಮಾನಸಿಕ ಆರೋಗ್ಯ – ಸಲಾಡ್‌ನಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ವಿಟಮಿನ್ ಬಿ ಮತ್ತು ಮೆಗ್ನೀಸಿಯಮ್ ಸಲಾಡ್‌ನಲ್ಲಿರುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿ.