ಸರ್ಕಾರ ತಂಬಾಕು ಮುಕ್ತ ರಾಜ್ಯ ಮಾಡಬೇಕು ಎಂಬ ನಿಟ್ಟಿನಲ್ಲಿ ಸತತ ಪ್ರಯತ್ನ ನಡಸುತ್ತಿದೆ. ಆದರೂ ತಂಬಾಕು ವ್ಯಸನಿಗಳು ಮಾತ್ರ ಕಡಿಮೆ ಆಗುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ 2016-17 ರಲ್ಲಿ ಗ್ಲೋಬಲ್ ಅಡೆಲ್ಟ್ ಟೊಬ್ಯಾಕೋ ಸರ್ವೆ ನಡೆಸಿದೆ. ಈ ಸರ್ವೇ ಪ್ರಕಾರ ಕರ್ನಾಟದಲ್ಲಿ ತಂಬಾಕು ವ್ಯಸನಿಗಳು 22.8%ವಯಸ್ಕರು ಇದ್ದಾರಂತೆ. ಅಂದರೆ ಒಟ್ಟು ಜನಸಂಖ್ಯೆ ಪೈಕಿ 1.36 ಕೋಟಿ ಜನ ತಂಬಾಕು ಸೇವನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪ್ರತಿ ವರ್ಷ ಲಕ್ಷಾಂತರ ಜನ ಈ ತಂಬಾಕುವಿನಿಂದ ಸಾವನ್ನಪ್ಪುತ್ತಿದ್ದಾರೆ ಎನ್ನಲಾಗಿದೆ. ಆರೋಗ್ಯ ಇಲಾಖೆ ನೀಡಿರುವ ಅಂಕಿ- ಅಂಶಗಳ ಪ್ರಕಾರ ನೋಡೋದಾದ್ರೆ, ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಜನರು ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾರಣಾಂತಿಕ ರೋಗಕ್ಕೆ ತುತ್ತಾಗಿ ಸಾಯುತ್ತಿದ್ದಾರಂತೆ. ಕಳೆದ ಆರು ವರ್ಷಗಳಲ್ಲಿ 1,36,943 ಲಕ್ಷ ಮಂದಿಗೆ ತಂಬಾಕು ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಸರ್ಕಾರ ತಂಬಾಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮ ವಹಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ನಿಷೇಧ ಮಾಡಲಾಗಿದೆ. ಪ್ರತಿ ವರ್ಷ ತಂಬಾಕು, ಸಿಗರೇಟ್ ಸೇದುವವರ ಜೊತೆ ಪರೋಕ್ಷವಾಗಿ ಅದರ ಸೇವನೆಯಿಂದಲೂ ಸಾಕಷ್ಟು ಜನ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅನೇಕರು ಸಾವನ್ನಪ್ಪುತ್ತಿದ್ದಾರೆ.