ಗೊರಕೆ ಒಂದು ತಲೆನೋವಿನ ಸಮಸ್ಯೆ. ಗೊರಕೆ ಹೊಡೆಯುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಕ್ಕಪಕ್ಕದಲ್ಲಿ ಮಲಗಿರುವವರಿಗೆ ಇದು ನಿದ್ರೆ ನೀಡುವುದಿಲ್ಲ. ಉಸಿರಾಟ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ ಆಂತರಿಕ ಅಂಗಾಂಶಗಳ ಕಂಪನ ಉಂಟಾಗುತ್ತದೆ. ಅಂಗಾಂಶಗಳ ಕಂಪನವೇ ಗೊರಕೆ ಎಂದು ತಜ್ಞರು ಹೇಳುತ್ತಾರೆ. ಈ ಗೊರಕೆಯ ಸಮಸ್ಯೆಯನ್ನು ನಿವಾರಿಸಲು ಮನೆ ಮದ್ದು ನೆರವಾಗುತ್ತದೆ.
ಅರಿಶಿನದಲ್ಲಿ ಅನೇಕ ಪೋಷಕಾಂಶಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಅರಿಶಿನದ ಹಾಲನ್ನು ಕುಡಿಯುವುದರಿಂದ ಗೊರಕೆಯ ಸಮಸ್ಯೆ ಮತ್ತು ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತದೆ. ಅರಿಶಿನ ಶರೀರದ ನೋವನ್ನು ಹೋಗಲಾಡಿಸಿ, ಒಳ್ಳೆಯ ನಿದ್ದೆ ಬರುವಂತೆ ಮಾಡುತ್ತದೆ.
ಕೆಲವರು ಸೈನಸ್ ಸಮಸ್ಯೆಯಿಂದ ಕೂಡ ಗೊರಕೆ ಹೊಡೆಯುತ್ತಾರೆ. ಈ ಸಮಸ್ಯೆಯಿಂದ ಪಾರಾಗಲು ಪ್ರತಿನಿತ್ಯ ಬೆಳ್ಳುಳ್ಳಿಯನ್ನು ತಿನ್ನಬೇಕು. ಬೆಳ್ಳುಳ್ಳಿಯ 1-2 ಎಸಳನ್ನು ತುಪ್ಪದಲ್ಲಿ ಹುರಿದು ನೀರಿನೊಂದಿಗೆ ಸೇವಿಸಬೇಕು.
ಮಲಗುವುದಕ್ಕಿಂತ ಸ್ವಲ್ಪ ಹೊತ್ತು ಮುಂಚೆ 2-3 ಹನಿ ಆಲಿವ್ ಎಣ್ಣೆಯನ್ನು ಮೂಗಿನೊಳಗೆ ಬಿಡಿ. ಆಲಿವ್ ಎಣ್ಣೆಯಲ್ಲಿರುವ ಎಂಟಿ-ಬ್ಯಾಕ್ಟೀರಿಯಲ್ ಗುಣ ಉರಿಯೂತದ ಸಮಸ್ಯೆಯನ್ನು ಕಡಿಮೆಮಾಡಿ ಉಸಿರಾಡಲು ಸಹಾಯ ಮಾಡುತ್ತದೆ. ಇದರಿಂದ ಗೊರಕೆ ಕೂಡ ಕಡಿಮೆಯಾಗುತ್ತದೆ.
ಒಂದು ಲೋಟ ಬಿಸಿನೀರಿಗೆ ದಾಲ್ಚಿನ್ನಿ ಪೌಡರ್ ಮತ್ತು ಜೇನುತುಪ್ಪವನ್ನು ಸೇರಿಸಿ ಮಲಗುವ ಮುನ್ನ ಕುಡಿದರೆ ಗೊರಕೆ ಸಮಸ್ಯೆಯಿಂದ ದೂರವಿರಬಹುದು.
ಪುದೀನಾ ಎಲೆಗಳು ಎಂಟಿ ಬ್ಯಾಕ್ಟೀರಿಯಾ ಮತ್ತು ಎಂಟಿ ವೈರಸ್ ಗುಣಗಳಿಂದ ಸಮೃದ್ಧವಾಗಿದೆ. ಮಲಗುವ ಮುನ್ನ ಪುದೀನ ಎಣ್ಣೆಯ 2-3 ಹನಿಗಳನ್ನು ಮೂಗಿಗೆ ಬಿಡುವುದರಿಂದ ಗೊರಕೆ ಬರುವುದಿಲ್ಲ. ಇದರ ಹೊರತಾಗಿ ನೀರಿಗೆ ಕೆಲವು ಪುದೀನಾ ಎಲೆಗಳನ್ನು ಸೇರಿಸಿ ಕುದಿಸಿ, ಆ ನೀರನ್ನು ಕುಡಿಯುವುದರಿಂದಲೂ ಗೊರಕೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.