ಕೋಲಾರ: ಕುರಿ ಕಳ್ಳರನ್ನು ಅಟ್ಟಾಡಿಸಿ ಹಿಡಿದಿದ್ದ ವ್ಯಕ್ತಿಯನ್ನು ಕಳ್ಳರು ಬರ್ಬರವಾಗಿ ಕೊಲೆಗೈದು ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಹಳಗೇರಿ ಗ್ರಾಮದ ಟೋಲ್ ನಾಕಾ ಬಳಿ ನಡೆದಿದೆ.
ಶರಣಪ್ಪ ಜಮ್ಮನಕಟ್ಟಿ (23) ಕೊಲೆಯಾಗಿರುವ ದುರ್ದೈವಿ. ಕಳ್ಳರ ಗುಂಪು ಶರಣಪ್ಪ ಅವರ ದಡ್ಡಿಯಲ್ಲಿದ್ದ ಕುರಿಗ್ಳನ್ನು ಕಡಿಯಲು ಬಂದಿತ್ತು. ಇದನ್ನು ಶರಣಪ್ಪ ಗಮನಿಸಿ ಕಳ್ಳರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಓರ್ವ ಆರೋಪಿ ಯಾಕುಬ್ ಎಂಬಾತನನ್ನು ಹಿಡಿದಿದ್ದಾರೆ. ಈ ವೇಳೆ ಇನ್ನಿಬ್ಬರು ಆರೋಪಿಗಳು ಕಲ್ಲು ಹಾಗೂ ಕೊಡಲಿಯಿಂದ ಶರಣಪ್ಪ ಮೇಲೆ ಹಲ್ಲೆ ನಡೆಸಿ ಯಾಕೂಬ್ ನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.
ಗಂಭೀರವಾಗಿ ಹಲ್ಲೆಗೊಳಗಾದ ಶರಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕೆರೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯಾಕೂಬ್ ಅಗಸಿಮನಿ, ಸಲ್ಮಾನ್ ಕರೆಮನ್ಸೂರ್, ಸಚಿನ್ ಭಜಂತ್ರಿ ಬಂಧಿತ ಆರೋಪಿಗಳು