ಲಖನೌ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನನ್ನು ಉತ್ತರಪ್ರದೇಶದ ಮುರ್ದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಫಹೀಮ್ ಅಲಿಯಾಸ್ ಎಟಿಎಂ ನನ್ನು ಬಂಧಿಸಿದ್ದು, ಅಲ್ಲಿದ್ದ ಆತನ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿದೆ.
ಸಧ್ಯ ಆರೋಪಿ ಫಹಿಮ್ ನನ್ನು ಬಾಡಿ ವಾರೆಂಟ್ ಪಡೆದು ವಶಕ್ಕೆ ಪಡೆದುಕೊಳ್ಳಲು ಕೋಡಿಗೆಹಳ್ಳಿ ಪೊಲೀಸರು ಮುಂದಾಗಿದ್ದಾರೆ. ಫಹೀಮ್ ದೇಶಾದ್ಯಂತ ಕಳ್ಳತ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕರ್ನಾಟಕದ ಬೆಂಗಳೂರು, ಉತ್ತರ ಪ್ರದೇಶದ ವಿವಿಧ ನಗರ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದ. ಈ ಹಿಂದೆ ಅಪರಾಧ ಪ್ರಕರಾದಲ್ಲಿ ಜೈಲು ಸೇರಿದ್ದ ಫಹೀಮ್ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಮತ್ತದೇ ಕೃತ್ಯದಲ್ಲಿ ಭಾಗಿಯಾಗಿದ್ದ.
ಏ.24ರಂದು ಬೆಂಗಳೂರಿನ ಸಹಕಾರನಗರದಲ್ಲಿ ವೈದ್ಯನ ಮನೆಯಲ್ಲಿ ಫಹೀಮ್ ಗ್ಯಾಂಗ್ ಕಳ್ಳತನ. ಡಾ.ಉಮಾಶಂಕರ್ ಅವರ ಮನೆಗೆ ನುಗ್ಗಿ 40 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ವೇಳೆ ವೈದ್ಯರಿಗೆ ಗನ್ ತೋರಿಸಿ ಹೆದರಿಸಿದ್ದರು. ಈ ಬಗ್ಗೆ ಕೋಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಡಿಗೆ ಹಳ್ಳಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ಆತನನ್ನು ಮುರ್ದಾಬಾದ್ ಪೊಲೀಸರು ಬಂಧಿಸಿದ್ದಾರೆ.