
ಅಯೋಧ್ಯೆಯಲ್ಲಿ ಧಾರವಾಡ ಮೂಲದವರ ಹಣ ಕಳವು ಮಾಡಲಾಗಿದೆ. ಎರಡು ಕುಟುಂಬದವರ ಬ್ಯಾಗ್, ಮೊಬೈಲ್ ಹಾಗೂ ನಗದನ್ನು ಕಳ್ಳರು ದೋಚಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಮುಗಿಸಿ ಅಯೋಧ್ಯೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಅರುಣಕುಮಾರ್ ಮತ್ತು ಬಸವರಾಜ ಕೋಟ್ಯಾಳ್ ಅವರ ಕುಟುಂಬದವರ ಹಣ ಗೋಚಲಾಗಿದೆ.
ಧಾರವಾಡದ ಶೆಟ್ಟರ್ ಕಾಲೋನಿ ನಿವಾಸಿಯಾಗಿರುವ ಅರುಣಕುಮಾರ್ ಬಡಿಗೇರ, ಮಾಳಮಡ್ಡಿ ಬಡಾವಣೆ ನಿವಾಸಿಯಾಗಿರುವ ಬಸವರಾಜ ಕೋಟ್ಯಾಳ್ ಅವರು ಎರಡು ಕಾರಿನ ಗಾಜು ಒಡೆದು ಬ್ಯಾಗ್ ಗಳನ್ನು ಕಳವು ಮಾಡಲಾಗಿದೆ.
10 ಮೊಬೈಲ್, 20 ಸಾವಿರ ರೂ. ನಗದು, ಎಟಿಎಂ ಸೇರಿ ಬಟ್ಟೆಗಳನ್ನು ದೋಚಲಾಗಿದೆ. ಅಯೋಧ್ಯೆ ರಾಮನ ದರ್ಶನ ಮುಗಿಸಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.