ಬೆಂಗಳೂರು : ‘ನಮ್ಮ ಮೆಟ್ರೋ’ ದಲ್ಲಿ ಗೋಬಿ ತಿಂದ ಯುವಕನಿಗೆ 500 ರೂ ದಂಡ ವಿಧಿಸಿದ ಬೆನ್ನಲ್ಲೇ ಫ್ರಾಂಕ್ ಮಾಡಿ ಹುಚ್ಚಾಟ ಮೆರೆದ ಯೂಟ್ಯೂಬರ್ ಗೂ 500 ರೂ. ದಂಡ ವಿಧಿಸಲಾಗಿದೆ.
ವಿಜಯನಗರದಿಂದ ಮೆಜೆಸ್ಟಿಕ್ಗೆ ಬರುವ ಪರ್ಪಲ್ ಲೈನ್ ಮೆಟ್ರೋದಲ್ಲಿ ಯೂಟ್ಯೂಬರ್ ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದಾನೆ. ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್ ಮಾಡಿದ್ದನು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಫ್ರಾಂಕ್ ಮಾಡಿದ ಯುವಕನ ವಿಳಾಸ ಪತ್ತೆ ಹಚ್ಚಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಗೋವಿಂದರಾಜು ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಪ್ರಜ್ಜು ವಿರುದ್ಧ ದೂರು ದಾಖಲಿಸಿ 500 ರೂ ದಂಡ ವಿಧಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಇದನ್ನು ಗಂಭೀರವಾಗಿ ತೆಗೆದುಕೊಂಡ ಬಿಎಂಆರ್ ಸಿ ಎಲ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.