ಪ್ರಪಂಚದ ಅತೀ ಶ್ರೀಮಂತ ವ್ಯಕ್ತಿ ಟೆಸ್ಲಾ ಕಂಪನಿ ಸಿಇಒ ಎಲೋನ್ ಮಸ್ಕ್ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ತಾನಿದ್ದ ಮನೆಯನ್ನೇ ನೈಟ್ ಕ್ಲಬ್ ಆಗಿ ಪರಿವರ್ತಿಸಬೇಕಾದ ಸಂದರ್ಭವೂ ಇತ್ತೆಂದು ಹಳೆಯ ಘಟನೆಯನ್ನು ಅವರು ಮೆಲುಕು ಹಾಕಿದ್ದಾರೆ.
ಎಲೋನ್ ಮಸ್ಕ್ ಅವರನ್ನು ಉದ್ದೇಶಿಸಿ ಟ್ವಿಟ್ಟರ್ ಬಳಕೆದಾರರು ಎರಡು ಸಾಲು ಬರೆದಿದ್ದರು, ಉತ್ತಮ ಕುಟುಂಬದಲ್ಲಿ ಜನಿಸಿದ ಕಾರಣ ಎಲೋನ್ ಮಸ್ಕ್ ಜೀವನದಲ್ಲಿ ವರ್ಣರಂಜಿತವಾಗಿ ಯಶಸ್ವಿಯಾಗಿದ್ದರೆ, ಈ ಎಲ್ಲಾ ಶ್ರೀಮಂತ ಮಕ್ಕಳು ಶಾಲೆಗೆ ಏಕೆ ಹೋಗುತ್ತಾರೆ ? ಎಂದಿಗೂ ಅವರು ಉದ್ಯೋಗ ಬಯಸಲ್ಲ, ವ್ಯರ್ಥ ಮಾಡುತ್ತಾರೆ ಎಂದು ಪದಗಳಲ್ಲೇ ಚಿವುಟಿದ್ದರು.
ಈ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ಮಸ್ಕ್, ತುಂಬ ಹಣದ ನಡುವೆ ಬೆಳೆದ ಮಕ್ಕಳು ಏನೂ ಇಲ್ಲದೆ ಬೆಳೆದ ಮಕ್ಕಳಿಗಿಂತ ಕಡಿಮೆ ಪ್ರೇರಣೆ ಹೊಂದಿರುತ್ತಾರೆ ಎಂದಿದ್ದಾರೆ.
BIG NEWS: PSI ಹುದ್ದೆ ಅಕ್ರಮ; ನೇಮಕಾತಿ ವಿಭಾಗದ ಎಲ್ಲಾ ಸಿಬ್ಬಂದಿ ವರ್ಗಾವಣೆಗೆ ನಿರ್ಧಾರ
ನಾವು 95ರಲ್ಲಿ ಮೊದಲ ಕಂಪನಿಯನ್ನು ಪ್ರಾರಂಭಿಸಿದಾಗ ಸ್ಟೂಡೆಂಟ್ ಲೋನ್ ಇತ್ತು. ನಾನೇ ನಿರ್ಮಿಸಿದ ಕಂಪ್ಯೂಟರ್ ಹಾಗೂ ಕೆಲವು ಸಾವಿರ ಡಾಲರ್‌ನಷ್ಟೇ ಹೊಂದಿದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.
ಮಸ್ಕ್ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಪುಣೆ ಮೂಲದ ಟೆಕ್ಕಿ ಹಾಗೂ ಮಸ್ಕ್ ಜತೆ ಸದಾ ಸಂವಹನ ನಡೆಸುವ ಪ್ರಣಯ್ ಪಾಥೋಲ್, ಅವರ ವಿಚಾರದಲ್ಲಿ ಅನೇಕರು ಸುಳ್ಳು ಹರಡಿದ್ದಾರೆ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕುಟುಂಬದಲ್ಲಿ ಜನಿಸಿದ್ದರು, ಅವರ ತಂದೆ ಪಚ್ಚೆ ಗಣಿ ಹೊಂದಿದ್ದರೆಂದೂ ಸುದ್ದಿ ಹರಡಿಸಿದ್ದಾರೆ. 95ರಲ್ಲಿ ಮೊದಲ ಕಂಪನಿಯನ್ನು ಪ್ರಾರಂಭಿಸಿದಾಗ ವಾಸಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ. ವೈಎಂಸಿಎನಲ್ಲಿ ಸ್ನಾನ ಮಾಡಿ ಬರುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿದ್ದಾಗ ನೀವು ನಿಮ್ಮ ಮನೆ ಕೊಠಡಿಯನ್ನು ನೈಟ್ ಕ್ಲಬ್ ಮಾಡಿಕೊಂಡಿರಲಿಲ್ಲವೇ? ಎಂದು ಪ್ರಶ್ನೆ ಹಾಕಿದ್ದರು.
ಈ ಮಾತಿಗೆ ದನಿ ಗೂಡಿಸಿದ ಮಸ್ಕ್, ತಮ್ಮ ಮನೆಯನ್ನು ನೈಟ್ ಕ್ಲಬ್ ಆಗಿ ಪರಿವರ್ತಿಸಲು ಬಾಡಿಗೆ ಕೊಟ್ಟು, 5 ಡಾಲರ್ ಚಾರ್ಜ್ ವಿಧಿಸಲಾಗಿತ್ತು ಎಂದು ಉತ್ತರಿಸಿದ್ದಾರೆ.