ಬೆಂಗಳೂರು : ನಾನು ‘ಸೋಮಾರಿ ಸಿದ್ದ’ ಎಂಬ ಪದ ಬಳಸಿದ್ದು ಸಿದ್ದರಾಮಯ್ಯರಿಗೆ ಅಲ್ಲಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ನಾನೂ ಇವರಂತೆಯೇ ಸೋಮಾರಿ ಸಿದ್ದನಂತೆ ಕುಳಿತುಕೊಂಡು, ಜಾತಿ ಜಾತಿ ಎತ್ತಿಕಟ್ಟುವ ರಾಜಕಾರಣ ಮಾಡಬೇಕಿತ್ತಾ? ಅಭಿವೃದ್ಧಿ ರಾಕಾರಣ ಮಾಡಿದ್ದೇ ತಪ್ಪಾ? ಕರ್ನಾಟಕದಲ್ಲಿ 28 ಎಂಪಿಗಳಿದ್ದಾರೆ, ಯಾಕೆ ಮೈಸೂರು ಎಂಪಿಯನ್ನೇ ಟಾರ್ಗೆಟ್ ಮಾಡುತ್ತಾರೆ? ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಸೋಮಾರಿ ಸಿದ್ದ ಪದ ಬಳಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬೆನ್ನಲ್ಲೇ ಪ್ರತಾಪ್ ಸಿಂಹ ಸ್ಪಷ್ಗನೆ ನೀಡಿದ್ದಾರೆ.
ಸೋಮಾರಿ ಸಿದ್ದ ಅಂತಾ ನಾನು ಬಳಸಿದ್ದು ಸಿದ್ದರಾಮಯ್ಯ ಅವರಿಗೆ ಅಲ್ಲ. ಸೋಮಾರಿ ಸಿದ್ದ ಅನ್ನೋದು ನಾಮ ಪದವಲ್ಲ. ಅದು ಒಂದು ಸಂದರ್ಭ ವಿವರಿಸುವ ನಾಣ್ನುಡಿ ಅಷ್ಟೇ ಎಂದರು. ನಾನು ಬಳಸಿದ್ದ ನಾಣ್ನುಡಿಯನ್ನು ನಿಮಗೆ ಬಳಸಿದ್ದು ಅಂತಾ ತಿರುಚುವ ಯತ್ನ ನಡೆದಿದೆ ಎಂದು ಪ್ರತಾಪ್ ಸಿಂಹ ಹೇಳಿದರು.