ಬಾಗಲಕೋಟೆ : ಕಳ್ಳರ ಹಾವಳಿ ತಡೆಯಲು ಮಹಿಳೆಯರು ‘ಒನಕೆ ಓಬವ್ವ’ನ ಅವತಾರ ತಾಳಿದ ಘಟನೆ ಬಾಗಲಕೋಟೆಯ ಮುಧೋಳದಲ್ಲಿ ನಡೆದಿದೆ.
ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರಾತ್ರಿ ವೇಳೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ ವೇಳೆ ಮನೆಗೆ ನುಗ್ಗುವ ಕಳ್ಳರು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ.
ಇದರಿಂದ ಬೇಸತ್ತ ಮಹಿಳೆಯರು ಸ್ವತಹ ತಾವೇ ದೊಣ್ಣೆಯನ್ನು ಹಿಡಿದು ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಪೊಲೀಸರು ಮಾಡಬೇಕಾದ ಕೆಲಸವನ್ನು ಸ್ವತಹ ಮಹಿಳೆಯರೇ ಮಾಡುತ್ತಿದ್ದು, ಮಹಿಳೆಯರ ಧೈರ್ಯಕ್ಕೆ ಗ್ರಾಮದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.