ಚಾಮರಾಜನಗರ : ಈಗಂತೂ ‘ಕರಿಮಣಿ ಮಾಲೀಕ ನೀನಲ್ಲ’ ಹಾಡಿನದ್ದೇ ಗುಂಗು.. ಕುಂತರೂ ನಿಂತರೂ ಎಲ್ಲರ ಮೊಬೈಲ್ ನಲ್ಲಿ ಈ ಹಾಡಿನದ್ದೇ ಸದ್ದು.ಅಷ್ಟರ ಮಟ್ಟಿಗೆ ಈ ಸಾಂಗ್ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.
‘ಕರಿಮಣಿ ಮಾಲೀಕ ನೀನಲ್ಲ’ ಹಾಡಿಗೆ ಪತ್ನಿ ರೀಲ್ಸ್ ಮಾಡಿದ್ದು, ಇದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಕುಮಾರ್ (33) ಎಂದು ಗುರುತಿಸಲಾಗಿದೆ. ಕುಮಾರ್ ಪತ್ನಿ ರೂಪಾ ಎಂಬುವವರು ತನ್ನ ಸೋದರಮಾವ ಹಾಗೂ ಸಹೋದರಿ ಜೊತೆ ಓ ನನ್ನ..ನೀನಲ್ಲ..ಕರಿಮಣಿ ಮಾಲೀಕ..ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ಊರಿನ ಕೆಲವರು ಕುಮಾರ್ ಕಾಲೆಳೆದಿದ್ದಾರೆ..ನಿನ್ನ ಹೆಂಡತಿ ಕರಿಮಣಿ ಮಾಲೀಕ ಯಾರಪ್ಪಾ..? ಎಂದು ಹೀಯಾಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಕುಮಾರ್ ಪತಿ ಜೊತೆ ಜಗಳ ಮಾಡಿಕೊಂಡು ರೀಲ್ಸ್ ಡಿಲೀಟ್ ಮಾಡುವಂತೆ ಹೇಳಿದ್ದಾನೆ, ಇದಕ್ಕೆ ಪತ್ನಿ ರೂಪಾ ನೋ ಅಂದಿದ್ದು..ಮನನೊಂದ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.