alex Certify ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ ನೀವು ಮಲಗುವ ವಿಧಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ ನೀವು ಮಲಗುವ ವಿಧಾನ….!

ಒಬ್ಬೊಬ್ಬರು ಒಂದೊಂದು ಭಂಗಿಯಲ್ಲಿ ಮಲಗುತ್ತಾರೆ. ಒಬ್ಬರು ನೇರವಾಗಿ ಮಲಗಿದರೆ, ಇನ್ನೊಬ್ಬರು ಮಗ್ಗಲು ಹಾಕಿ ಮಲಗುತ್ತಾರೆ. ಯಾರಿಗೆ ಯಾವ ಭಂಗಿಯ ಅಭ್ಯಾಸವಿದೆಯೋ ಆ ರೀತಿಯಲ್ಲಿ ಮಲಗಿದರೇ ಅವರಿಗೆ ನಿದ್ರೆ ಬರುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಪ್ರತಿದಿನ ಒಂದೇ ಭಂಗಿಯಲ್ಲಿ ಮಲಗುತ್ತಾನೆ. ಈ ಮಲಗುವ ಭಂಗಿಯೇ ವ್ಯಕ್ತಿಯ ಸ್ವಭಾವದ ಬಗ್ಗೆ ಹೇಳುತ್ತೆ.

ವ್ಯಕ್ತಿಯ ಮಲಗುವ ರೀತಿಯೇ ಅವನ ಆರೋಗ್ಯ ಮತ್ತು ವ್ಯಕ್ತಿತ್ವವನ್ನು ಹೇಳುತ್ತದೆ. ಹಾಗಾದರೆ ಯಾವ ಭಂಗಿ ಎಂತಹ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂಬುದರ ವಿವರ ಇಲ್ಲಿದೆ.

ಬೇಬಿ ಭಂಗಿ : ಈ ಭಂಗಿಯನ್ನು ‘ಕರ್ಲಿಂಗ್ ಅಪ್ ಲೈಕ್ ಎ ಬೇಬಿ’ ಅಥವಾ ಭ್ರೂಣದ ಪೊಸಿಶನ್ ಎಂದು ಹೇಳುತ್ತಾರೆ. ಹೆಚ್ಚಿನ ಜನ ಇದೇ ಭಂಗಿಯಲ್ಲಿ ಮಲಗುತ್ತಾರೆ. ಬೇಬಿ ಪೊಸಿಶನ್ ನಲ್ಲಿ ಮಲಗುವವರದು ಬಹಳ ಮುಗ್ಧ ಸ್ವಭಾವವಾಗಿರುತ್ತದೆ. ವಾಸ್ತವವಾಗಿ ಅವರು ಶಾಂತ ಸ್ವಭಾವದವರಾಗಿದ್ದು, ಹೊರಜಗತ್ತಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಾರೆ.

ಸ್ಟಮಕ್ ಸ್ಲೀಪರ್ : ಹೊಟ್ಟೆ ಕೆಳಗಾಗಿ ಮಲಗುವವರು ವಿರಳ. ಗರ್ಭಿಣಿ ಸ್ತ್ರೀಯರಿಗಂತು ಈ  ಭಂಗಿ ಅಪಾಯಕಾರಿ. ಸ್ಟಮಕ್ ಸ್ಲೀಪಿಂಗ್ ಪೊಸಿಶನ್ ನಲ್ಲಿ ಮಲಗುವವರು ಎಲ್ಲರ ಜೊತೆಗೆ ಹೊಂದಿಕೊಳ್ಳುತ್ತಾರೆ ಮತ್ತು ಸೋಶಿಯಲ್ ಆಗಿರುತ್ತಾರೆ. ಇವರು ಹೆಚ್ಚು ಆಲೋಚನೆ ಮಾಡುವುದಿಲ್ಲ. ಇಂತಹ ವ್ಯಕ್ತಿಗಳು ಸ್ವಲ್ಪ ಅಭದ್ರತೆ ಅನುಭವಿಸುತ್ತಾರೆ.

ಲಾಗ್ ಸ್ಲೀಪರ್ :  ಒಂದು ಮಗ್ಗಲಿನಲ್ಲಿ ಎರಡೂ ಕೈಗಳನ್ನು ಒಟ್ಟಿಗೆ ಇಟ್ಟು ಮಲಗುವವರು ಸ್ನೇಹ ಜೀವಿಗಳು ಮತ್ತು ವಿಶ್ವಾಸಾರ್ಹರಾಗಿರುತ್ತಾರೆ. ಇವರು ತಮ್ಮ ಗುಂಪಿನಲ್ಲಿ ಬಹಳ ಪ್ರಸಿದ್ಧಿ ಹೊಂದಿರುತ್ತಾರೆ.

ಸೈನಿಕ ಭಂಗಿ : ಒಬ್ಬ ಸೈನಿಕ ಹೇಗೆ ಸೀದಾ ನಿಲ್ಲುತ್ತಾನೋ ಹಾಗೆ ಮಲಗುವವರು ಬಹಳ ಕಟ್ಟುನಿಟ್ಟಿನ ಮತ್ತು ಕಠಿಣ ವ್ಯಕ್ತಿಯಾಗಿರುತ್ತಾರೆ. ಅವರು ತಮ್ಮ ಜೀವನವನ್ನು ಬಹಳ ಗಂಭೀರವಾಗಿ ಸ್ವೀಕರಿಸುತ್ತಾರೆ.

ದಿಂಬಿನ ಜೊತೆ ಮಲಗುವುದು : ದಿಂಬಿನ ಜೊತೆ ಮಲಗುವವರು ತಮ್ಮ ಜೀವನದಲ್ಲಿ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಇಂತಹ ಜನರಿಗೆ ಸಹಾಯ ಮಾಡುವ ಗುಣ ತುಂಬ ಇರುತ್ತದೆ. ತಮ್ಮನ್ನು ಪ್ರೀತಿಸುವವರಿಗೆ ಇವರು ಏನು ಬೇಕಾದರೂ ಮಾಡಬಲ್ಲರು.

ಬೆನ್ನಿನ ಮೇಲೆ ಮಲಗುವುದು : ಬೆನ್ನಿನ ಮೇಲೆ ಮಲಗುವವರು ಮುಂಜಾನೆ ಬಹಳ ಉತ್ಸಾಹದಿಂದ ಏಳುತ್ತಾರೆ. ಹೀಗೆ ಮಲಗುವವರು ತಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...